Sunday, September 6, 2026

BDA Apartments

Home Crime ಕಪಿಲಾ ನದಿಯಲ್ಲಿ ಯುವಕ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಸಂಚು ರೂಪಿಸಿ ಮಗನ ಕೊಲೆ ಎಂದು ಆರೋಪಿಸಿದ...

ಕಪಿಲಾ ನದಿಯಲ್ಲಿ ಯುವಕ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಸಂಚು ರೂಪಿಸಿ ಮಗನ ಕೊಲೆ ಎಂದು ಆರೋಪಿಸಿದ ತಂದೆ.

ಮೈಸೂರು,ಜುಲೈ,14,2022(www.justkannada.in): ಕಪಿಲಾ ನದಿಯಲ್ಲಿ ಯುವಕ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದು ಆಕಸ್ಮಿಕ ಘಟನೆ ಅಲ್ಲ  ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ನಾಪತ್ತೆಯಾದ ಯುವಕನ ತಂದೆ ಆರೋಪಿಸಿದ್ದಾರೆ.

ನಂಜನಗೂಡು ತಾಲೂಕು ಹೆಜ್ಜಿಗೆ ಗ್ರಾಮದ ಬಳಿ ತುಂಬಿ ತುಳುಕುತ್ತಿದ್ದ ಕಪಿಲಾ ನದಿಯಲ್ಲಿ  ಅಬ್ದುಲ್ ರಹೀಂ ಸೇರಿ ಮೂವರು ಯುವಕರು  ಬಿದ್ದಿದ್ದರು. ಈ ಪೈಕಿ ಇಬ್ಬರು ಈಜಿ ದಡ ಸೇರಿದ್ದರು. ಅಬ್ದುಲ್ ನಾಪತ್ತೆಯಾಗಿದ್ದು  ಶೋಧಕಾರ್ಯ ಮುಂದುವರೆದಿದೆ. ಇದೀಗ  ಅಬ್ದುಲ್ ರಹೀಂ ನಾಪತ್ತೆಯಾಗಿರುವುದು ಅನುಮಾನ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ನಾಪತ್ತೆಯಾದ ಯುವಕ ಅಬ್ದುಲ್ ರಹೀಂ ಪಾಷ ತಂದೆ ಮುನಾವರ್ ಪಾಷಾ, ಇದು ಆಕಸ್ಮಿಕ ಘಟನೆ ಅಲ್ಲ  ಸಂಚು ರೂಪಿಸಿ ಕೊಲೆ ಮಾಡಲಾಗಿದೆ. ಮಗನನ್ನು ಸಮಯ ನೋಡಿ ಕೊಲೆ ಮಾಡಲಾಗಿದೆ. ಆತ ಬಟ್ಟೆ ಚಪ್ಪಲಿ ಬಿಚ್ಚದೆ ನೀರಿಗೆ ಬಿದ್ದಿದ್ದಾನೆ‌. ಆತನ ಜೊತೆಯವರೇ ಕೊಲೆ ಮಾಡಲು ಈ ರೀತಿ ಮಾಡಿದ್ದಾರೆ.

ನ್ಯಾಯ ಕೇಳಲು ಹೋದರೆ ಸರ್ಕಲ್ ಇನ್ಸ್ ಪೆಕ್ಟರ್ ತೆಗಳುತ್ತಾರೆ. ನನ್ನ ಮಗ ಅಬ್ದುಲ್ ರಹೀಂ ಪಾಷಾ ತೊಟ್ಟಿದ್ದ ಬಟ್ಟೆಯಲ್ಲಿಯೇ ನೀರಿಗೆ ಬಿದ್ದಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೊಲೆಗೆ ಸಂಚು ನಡೆಸಿರುವವರ ವಿರುದ್ಧ ಕ್ರಮಕೈಗೊಂಡು ನ್ಯಾಯ ಕೇಳಲು ಹೋದರೆ ಸರ್ಕಲ್ ಇನ್ಸ್ ಪೆಕ್ಟರ್ ತೆಗಳುತ್ತಾರೆ ಎಂದು ನಾಪತ್ತೆಯಾಗಿರುವ ಅಬ್ದುಲ್ ರಹೀಂ ತಂದೆ ಮುನಾವರ್ ಪಾಷ ಆರೋಪ ಮಾಡಿದ್ದಾರೆ.

Key words: twist -missing -boy- Kapila river-father -accused -murder