ಈದ್ಗಾ ಮೈದಾನದಲ್ಲಿ ಹಬ್ಬ ಆಚರಣೆಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ: ರಾಷ್ಟ್ರಧ್ವಜ ಹಾರಿಸುತ್ತೇವೆ- ಸಂಸದ ಪಿಸಿ ಮೋಹನ್.

ಬೆಂಗಳೂರು,ಜುಲೈ,14,2022(www.justkannada.in): ಇತ್ತೀಚೆಗೆ ಈದ್ಗಾ ಮೈದಾನ ವಿವಾದ ಸಾಕಷ್ಟು ಸುದ್ಧಿಯಾಗಿದ್ದು ಈ ಮಧ್ಯೆ ಈದ್ಗಾ ಮೈದಾನದಲ್ಲಿ ಹಬ್ಬ ಆಚರಣೆಗೆ ಯಾರ ದೊಣ್ಣೆನಾಯಕನ ಅಪ್ಪಣೆ ಬೇಕಿಲ್ಲ: ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದು ಸಂಸದ ಪಿಸಿ ಮೋಹನ್ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದ ಪಿಸಿ ಮೋಹನ್, ಈದ್ಗಾ ಮೈದಾನ ಬಿಬಿಎಂಪಿಯ ಆಟದ ಮೈದಾನ. ಮೈದಾನದಲ್ಲಿ ಹಬ್ಬ ಆಚರಣೆ  ಮಾಡುತ್ತೇವೆ.  ಮೈದಾನದಲ್ಲಿ ರಾಷ್ಟ್ರದ್ವಜ ಹಾರಿಸುತ್ತೇವೆ. ರಾಷ್ಟ್ರಧ್ವಜ ಹಾರಿಸಲು ಅವಕಾಶ ಕೊಡದಿದ್ದರೇ  ಅದು ದೇಶಕ್ಕೆ ಮಾಡಿದ ಅಪಮಾನ. ರಾಷ್ಟ್ರ ಧ್ವಜ ಹಾರಿಸಲು ಅನುಮತಿ ಕೊಡಲೇಬೇಕು ಎಂದರು.

ಅಲ್ಲದೆ ಈದ್ಗಾ ಮೈದಾನ ಸರ್ಕಾರದ ಸ್ವತ್ತು. ಮೈದಾನಕ್ಕೆ ಜಯಚಾಮರಾಜೇಂದ್ರ ಮೈದಾನ  ಎಂದು ಹೆಸರಿಡಬೇಕು ಎಂದು ಸಂಸದ ಪಿಸಿ ಮೋಹನ್ ಆಗ್ರಹಿಸಿದ್ದಾರೆ.

Key words: festival-celebration – Idga Maidana-MP- PC Mohan.