ಆಟೋ-ಕಾರು ಡಿಕ್ಕಿ : ಮೂವರು ದುರ್ಮರಣ.

ಮಂಡ್ಯ,ಜುಲೈ,14,2022(www.justkannada.in):  ಆಟೋಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಮೂವರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.

ಆಟೋ ಚಾಲಕ ಶ್ರೀನಿವಾಸ್(35), ರವಿಕುಮಾರ್(50) ಭಾಸ್ಕರ್(48) ಮೃತಪಟ್ಟವರು.  ಕಾರಿನಲ್ಲಿದ್ದ ಇಬ್ಬರ ಸ್ಥಿತಿ ಗಂಭೀರ,ಆಸ್ಪತ್ರೆಗೆ ದಾಖಲಿಸಲಾಗಿದೆ.  ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿಯಾಗಿದ್ದು, ಕಾರು ಡಿಕ್ಕೆ ಹೊಡೆದ ರಭಸಕ್ಕೆ ಆಟೋದಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ.tractor-collision-bike-bike-rider-dies-on-the-spot-mysore

ಸ್ಥಳಕ್ಕೆ ಮಳವಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.

Key words: Auto-car-accident-Three-died.