ವಿಧಾನಸೌಧದಲ್ಲಿ ನಕಲಿ ಪಾಸ್ ಗಳ ಹಾವಳಿ: ಪೊಲೀಸರಿಂದ ಪರಿಶೀಲನೆ, ವಶಕ್ಕೆ.

ಬೆಂಗಳೂರು,ಜುಲೈ,14,2023(www.justkannada.in):  ರಾಜ್ಯ ಬಜೆಟ್​ ಮಂಡನೆ ವೇಳೆ ತಿಪ್ಪೇರುದ್ರಪ್ಪ ಎಂಬ ವ್ಯಕ್ತಿ ಸದನದ ಒಳಗೆ ಪ್ರವೇಶಿಸಿ, ಶಾಸಕರ ಸ್ಥಾನದಲ್ಲಿ ಕೂತಿದ್ದು ವೈರಲ್ ಆದ ಬೆನ್ನಲ್ಲೆ, ಭದ್ರತಾ ಲೋಪವನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿಧಾನಸೌಧದಲ್ಲಿ ನಕಲಿ ಪಾಸ್​​ಗಳ ಹಾವಳಿ ಜಾಲವನ್ನು ಪತ್ತೆ ಹಚ್ಚಿದ್ದಾರೆ.

ಹೌದು  ಪೊಲೀಸರು ವಿಧಾನಸೌಧಕ್ಕೆ ಬರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿದ್ದಾರೆ. ಕೇವಲ ನಾಲ್ಕೇ ದಿನದಲ್ಲಿ ಬರೋಬ್ಬರಿ ಮುನ್ನೂರಕ್ಕೂ ಹೆಚ್ಚು ನಕಲಿ ಪಾಸ್ ಪತ್ತೆಹಚ್ಚಿದ್ದಾರೆ. ಅಧಿಕೃತ ಪಾಸ್​ಗಳನ್ನು ಕಲರ್ ಜೆರಾಕ್ಸ್, ಓಲ್ಡ್ ಪಾಸ್​ಗಳು, ಅವಧಿ ಮುಗಿದಿರುವ ಪಾಸ್​ಗಳು, ಮತ್ತು ವಾಹನಗಳ ನಕಲಿ ಪಾಸ್​​ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಧಾನಸೌದಕ್ಕೆ ಪ್ರವೇಶಿಸುವ ಎಲ್ಲಾ ಗೇಟ್​ ಗಳಲ್ಲಿ ಪ್ರತಿಯೊಬ್ಬರನ್ನು ಪರಿಶೀಲನೆ ಮಾಡುತ್ತಿದ್ದಾರೆ. ನಕಲಿ ಪಾಸ್ ಬಳಸಿ‌ ವಿಧಾನಸೌಧ ಒಳ ಪ್ರವೇಶ ಮಾಡುತ್ತಿದ್ದವರಿಗೆ ತಡೆದಿದ್ದಾರೆ. ಇದೀಗ ಪೊಲೀಸರು ಅವಧಿ‌ ಮುಗಿದಿರುವ ಪಾಸ್, ಕಲರ್ ಜೆರಕ್ಸ್ ಪಾಸ್​ಗಳನ್ನು ಸೀಜ್ ಮಾಡಿದ್ದಾರೆ. ಹಲವು ರಾಜಕಾರಣಿಗಳ ಬೆಂಬಲಿಗರಿಂದ ನಕಲಿ ಪಾಸ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಸದ್ಯ ನಕಲಿ ಪಾಸ ಬಳಸುತ್ತಿದ್ದ ಎಲ್ಲರ ಮಾಹಿತಿ ಸಂಗ್ರಹಿಸಿದ್ದಾರೆ.ಇನ್ನು ಮಾಜಿ ಎಂಎಲ್‌ಎ, ಎಂಎಲ್​​ಸಿ ಪಾಸ್​ಗಳೇ ನಕಲಿಯಾಗಿದೆ ಎನ್ನಲಾಗಿದೆ.

Key words: Fake –passes- Vidhansouda- Police –check- seize.