ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ವಂಚನೆ ಆರೋಪ: ಮಹಿಳೆ ನಿಶಾ ವಶಕ್ಕೆ .

ಬೆಂಗಳೂರು,ಜುಲೈ,14,2023(www.justkannada.in): ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರೇಳಿಕೊಂಡು  ವಂಚನೆ  ಮಾಡಿದ ಆರೋಪದಡಿ ನಿಶಾ ಎಂಬ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ನಿಶಾ ಎನ್ ಎನ್ ಪ್ರೊಡೆಕ್ಷನ್ ಮತ್ತು ಇವೆಂಟ್ ನಡೆಸುತ್ತಿದ್ದು ವನ್ಷಿಕಾ ಹೆಸರಿನಲ್ಲಿ ಮಕ್ಕಳ ಪೋಷಕರ ಬಳಿ ಲಕ್ಷ ಲಕ್ಷ ಹಣ ವಸೂಲಿ ಮಾಡಿದ ಆರೋಪ ಕೇಳಿ ಬಂದಿದೆ. ವನ್ಷಿಕಾ ತಾಯಿ ಯಶಸ್ವಿನಿ ಆನಂದ್ ಅವರನ್ನ ಇನ್ ಸ್ಟಾದಲ್ಲಿ ಪರಿಚಯ ಮಾಡಿಕೊಂಡಿದ್ದರು ಎನ್ನಲಾಗಿದೆ.

ಬಳಿಕ   ವನ್ಷಿಕಾಳನ್ನ ಇನ್ವೆಂಟ್ ಕಾರ್ಯಕ್ರಮಕ್ಕೆ ಕರೆದೊಯ್ಯುತ್ತಿದ್ದು ಇವೆಂಟ್ ನಲ್ಲಿ ಯಶಸ್ವಿನಿ ಆನಂದ್ ಅವರು ಸಹ ಭಾಗವಹಿಸುತ್ತಿದ್ದರಂತೆ. ನಂತರ ಭಿನ್ನಾಭಿಪ್ರಾಯದಿಂದಾಗಿ ಕಳೆದ 6 ತಿಂಗಳಿಂದ ಇವೆಂಟ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಬಳಿಕ  ವನ್ಷಿಕಾ ಹೆಸರು ಪ್ರಮೋಟ್ ಮಾಡದಂತೆ ನಿಶಾಗೆ ಯಶಸ್ವಿನಿ ಆನಂದ್ ಸೂಚಿಸಿದ್ದರಂತೆ.

ಇದೀಗ ಯಶಸ್ವಿನಿ ಆನಂದ್ ಅವರ ದೂರಿನ ಮೇರೆಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು ನಿಶಾರನ್ನ ಪೊಲೀಸರು ಬಂಧಿಸಿದ್ದಾರೆ.

Key words: Accusation – fraud – name – Master Anand’s –daughter- Vamshika- woman -arrested.