Wednesday, August 5, 2026

BDA Apartments

Home Front Page TVK ಜೊತೆ ಕಾಂಗ್ರೆಸ್ ಮೈತ್ರಿ ಬಗ್ಗೆ ವರಿಷ್ಠರು ನಿರ್ಧರಿಸ್ತಾರೆ- ಗೃಹ ಸಚಿವ ಪರಮೇಶ್ವರ್

TVK ಜೊತೆ ಕಾಂಗ್ರೆಸ್ ಮೈತ್ರಿ ಬಗ್ಗೆ ವರಿಷ್ಠರು ನಿರ್ಧರಿಸ್ತಾರೆ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮೇ,5,2026 (www.justkannada.in):  ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ 108 ಸ್ಥಾನಗಳನ್ನ ಗೆಲ್ಲುವ ಮೂಲಕ ಬಹುದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ  ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಇದೀಗ ಅಧಿಕಾರದ ಗದ್ದುಗೆಗೇರಲು ಇನ್ನೂ 10 ಸ್ಥಾನಗಳು ಬೇಕು. ಹೀಗಾಗಿ ಕಾಂಗ್ರೆಸ್ ಮೈತ್ರಿಗೆ ಮುಂದಾಗಲಿದೆಯಾ ಎಂಬ ವಿಚಾರ ಚರ್ಚೆಯಲ್ಲಿದೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಪರಮೇಶ್ವರ್  ಟಿವಿಕೆ ಜೊತೆ ಕಾಂಗ್ರೆಸ್ ಮೈತ್ರಿ ಕುರಿತು ವರಿಷ್ಠರು ನಿರ್ಧಾರ ಮಾಡುತ್ತಾರೆ. ಯಾವ ದೃಷ್ಠಿಯಿಂದ ತೀರ್ಮಾನ ಮಾಡುತ್ತಾರೆ ನೋಡಬೇಕು ಡಿಎಂಕೆ ಜೊತೆ ನಮ್ಮ ಪಕ್ಷ ಮೈತ್ರಿ ಮಾಡಿಕೊಂಡಿತ್ತು. ಹಳೇ ಮೈತ್ರಿ ಎಂಬ ಕಾರಣಕ್ಕೆ ಮುಂದುವರಿಸಿದ್ದಾರಾ ಗೊತ್ತಿಲ್ಲ ಎಂದರು.

ಬದಲಾವಣೆ ವಿಚಾರವಾಗಿ ಏನೇ ಇದ್ದರೂ ವರಿಷ್ಠರು ನಿರ್ಧರಿಸುತ್ತಾರೆ.  ರಾಹುಲ್ ಗಾಂಧಿ, ಸೋನಿಯಾ ಗಾಂಧಿ,  ಮಲ್ಲಿಕಾರ್ಜುನ ಖರ್ಗೆ ನಿರ್ಧಾರ ಮಾಡುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.

Key words: Congress, alliance, TVK, Home Minister, Parameshwar