ಮಂಗಳೂರು,ಮೇ,6,2026 (www.justkannada.in): ಹೈಕೋರ್ಟ್ ಆದೇಶದಂತೆ ಅಂಚೆ ಮತದಾನದ ಮರು ಏಣಿಕೆಯಲ್ಲಿ 52 ಮತಗಳನ್ನ ಹೆಚ್ಚು ಪಡೆದು ಗೆಲುವು ಸಾಧಿಸಿರುವ ಬಿಜೆಪಿಯ ಜೀವರಾಜ್ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿರುವ ಬಗ್ಗೆ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಸ್ಪೀಕರ್ ಯುಟಿ ಖಾದರ್, ನಾವು ಯಾವುದೇ ತಡ ಮಾಡಿಲ್ಲ. ಬೆಂಗಳೂರಿನಲ್ಲಿದ್ದಾಗ ಯಾರೂ ಕೂಡ ನನ್ನನ್ನು ಭೇಟಿಯಾಗಿಲ್ಲ. ನಿನ್ನೆ ಸಮಯ ಬೇಕೆಂದು ಅರ್ಜಿ ಕೊಟ್ಟಿದಾರೆ ಇದು ತಾಂತ್ರಿಕ ವಿಚಾರ ಆಗಿದ್ದರಿಂದ ಅಭಿಪ್ರಾಯ ಪಡೆಯಬೇಕು ಎಂದರು.
ಈ ಅಂಚೆಮತದಾನ ಮರುಎಣಿಕೆ ವಿಚಾರದಲ್ಲಿ ಸರ್ಕಾರದ ಕಾನೂನು ಹೋರಾಟ ಕುರಿತು ಪ್ರತಿಕ್ರಿಯಿಸಿದ ಯುಟಿ ಖಾದರ್, ಸರ್ಕಾರದ ಕಾನೂನು ಹೋರಾಟಕ್ಕೂ ನನಗೂ ಯಾವ ಸಂಬಂಧವಿಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಾನು ಕಾರ್ಯ ನಿರ್ವಹಿಸಬೇಕು ಯಾವಾಗ ಎಲ್ಲಿ ಯಾರು ತಪ್ಪು ಮಾಡಿದ್ದಾರೆ ತನಿಖೆಯಾಗಬೇಕು ಎಂದರು.
Key words: Jeevaraj, oath, delay, Speaker, UT Khader







