Sunday, September 20, 2026

BDA Apartments

Home Front Page ಕಾಂಗ್ರೆಸ್ ಗೆ ಸೇರಿಸಿಕೊಳ್ಳುವಾಗ ಕೊಟ್ಟಿದ್ದ ಮಾತು ಉಳಿಸಿಕೊಂಡಿದ್ದಾರೆ- ಸಚಿವ ಶಿವಲಿಂಗೇಗೌಡ

ಕಾಂಗ್ರೆಸ್ ಗೆ ಸೇರಿಸಿಕೊಳ್ಳುವಾಗ ಕೊಟ್ಟಿದ್ದ ಮಾತು ಉಳಿಸಿಕೊಂಡಿದ್ದಾರೆ- ಸಚಿವ ಶಿವಲಿಂಗೇಗೌಡ

ಹಾಸನ,ಆಗಸ್ಟ್,5,2026 (www.justkannada.in): ರಾಜ್ಯ ಸಚಿವ ಸಂಪುಟದಲ್ಲಿ ತಮಗೆ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಕೆ.ಎಂ ಶಿವಲಿಂಗೇಗೌಡರು,  ಕಾಂಗ್ರೆಸ್ ಗೆ ಸೇರಿಸಿಕೊಳ್ಳುವಾಗ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ ಎಂದಿದ್ದಾರೆ.

ಇಂದು ಮಾತನಾಡಿದ ಸಚಿವ ಕೆ.ಎಂ ಶಿವಲಿಂಗೇಗೌಡ,  ಹಾಸನ ಜಿಲ್ಲೆಗೆ ಹೊಸ ನಾಯಕತ್ವವನ್ನು ಹೈಕಮಾಂಡ್ ನೀಡಿದೆ. ನಮ್ಮ ತಂದೆ ತಾಯಿಯ ಪುಣ್ಯದಿಂದ ನನಗೆ ಮಂತ್ರಿಗಿರಿ ಸಿಕ್ಕಿದೆ.  ಜನತೆಯ ವಿಶ್ವಾಸ ಉಳಿಸಿಕೊಳ್ಳುವುದು ಮುಖ್ಯ.  ಆಕಸ್ಮಿಕವಾಗಿ ಹೈಕಮಾಂಡ್ ಹಾಸನ ಜಿಲ್ಲೆಗೆ ಸಚಿವ ಸ್ಥಾನ ಕೊಟ್ಟಿದೆ  ಎಂದರು.ಕಾಂಗ್ರೆಸ್ ಗೆ ಸೇರಿಸಿಕೊಳ್ಳುವಾಗ ಕೊಟ್ಟಿದ್ದ ಮಾತು ಉಳಿಸಿಕೊಂಡಿದ್ದಾರೆ BDA JK...

ನನ್ನನ್ನು ಕಾಂಗ್ರೆಸ್ ಸೇರಿಸಿಕೊಳ್ಳುವಾಗ  ಮಾತು ಕೊಟ್ಟಿದ್ದರು.  ಈಗ ಅದನ್ನು ಉಳಿಸಿಕೊಂಡಿದ್ದಾರೆ.  ಇವತ್ತು ಕರ್ನಾಟಕದಲ್ಲಿ ಭರದ ಛಾಯೆ ಇದೆ.  ಬರಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಹೇಳಿದ್ದಾರೆ ಬರ ಅಧ್ಯಯನಕ್ಕೆ ಬಂದಾಗ ಹಾರ ಹಾಕಿಸಿಕೊಳ್ಳುವುದು ಸರಿಯಲ್ಲ. ಆದರೂ ಕಾರ್ಯಕರ್ತರು ಅಭಿಮಾನಿಗಳು ಹಾರ ಹಾಕಿದ್ದಾರೆ ಎಂದು ಕೆಎಂ ಶಿವಲಿಂಗೇಗೌಡರು ತಿಳಿಸಿದರು.ಸಚಿವ ಶಿವಲಿಂಗೇಗೌಡ jk02_new jk02 new

Key words: Minister, Shivalingegowda, promise, joining, Congress