ವರ್ಗಾವಣೆ ದಂಧೆ ನಡೆದಿದ್ದರೇ ಅಧಿವೇಶನದಲ್ಲಿ ಪ್ರಸ್ತಾಪಿಸಲಿ- ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಬೆಂಗಳೂರು,ನವೆಂಬರ್,18,2023(www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಿಪಕ್ಷಗಳು ವರ್ಗಾವಣೆ ದಂಧೆ ಆರೋಪ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ವರ್ಗಾವಣೆ ದಂಧೆ ಆಗಿದ್ದರೆ ವಿಪಕ್ಷಗಳು ಅಧಿವೇಶನದಲ್ಲಿ ಪ್ರಸ್ತಾಪಿಸಲಿ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿರುವ ವಿವೇಕಾನಂದಗೂ ಪೊಲೀಸ್​ ಇಲಾಖೆಯಲ್ಲಿನ ವಿವೇಕಾನಂದಗೂ ಸಂಬಂಧ ಇಲ್ಲ. ಅವರು ಹೇಳಿದ್ದು ಕಾಕತಾಳೀಯ ಆಗಿರಬೇಕು. ವರ್ಗಾವಣೆ ದಂಧೆ ಆಗಿದ್ದರೆ ವಿಪಕ್ಷಗಳು ಅಧಿವೇಶನದಲ್ಲಿ ಪ್ರಸ್ತಾಪಿಸಲಿ. ಸಮಾಧಾನ ಆಗುವ ರೀತಿಯಲ್ಲೇ ಸದನದಲ್ಲಿ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು.

Key words: transfer -scam – session – Home Minister- Dr. G. Parameshwar.