ನಾನು ಎಲ್ಲರ ಸ್ಪೀಕರ್:  ರಾಜಕೀಯ, ಜಾತಿ ಧರ್ಮದಿಂದ ಆ ಸ್ಥಾನವನ್ನ ನೋಡುವಂತಿಲ್ಲ -ಯು.ಟಿ ಖಾದರ್.

ಮಂಗಳೂರು,ನವೆಂಬರ್,18,2023(www.justkannada.in):  ಬಿಜೆಪಿಯವರು ಮುಸ್ಲೀಮರನ್ನ ದ್ವೇಷಿಸುತ್ತಿದ್ದರು. ಈಗ ಬಿಜೆಪಿ ಶಾಸಕರೇ ಸ್ಪೀಕರ್ ಸಾಬ್ ಎನ್ನುವಂತಾಗಿದೆ. ಈಗೆ ಮಾಡಿದ್ದು ಕಾಂಗ್ರೆಸ್ ಎಂಬ ಸಚಿವ ಜಮೀರ್ ಅಹ್ಮದ್ ಖಾನ್  ಭಾಷಣ  ಕುರಿತು ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿರುವ ಸ್ಪೀಕರ್ ಯುಟಿ ಖಾದರ್, ನಾನು ಎಲ್ಲರ ಸ್ಪೀಕರ್:  ರಾಜಕೀಯ, ಜಾತಿ ಧರ್ಮದಿಂದ ಆ ಸ್ಥಾನವನ್ನ ನೋಡುವಂತಿಲ್ಲ. ಸ್ಪೀಕರ್ ಸ್ಥಾನಕ್ಕೆ ರಾಜಕೀಯ ಇರಬಾರದು ಎಂದಿದ್ದಾರೆ.

 

ನನಗೆ ಗೌರವ ಕೊಡುವುದು ಖಾದರ್ ​ಗೆ ಗೌರವ ಕೊಟ್ಟಂತೆ ಅಲ್ಲ. ಸಂವಿಧಾನ ಪೀಠ ಮತ್ತು‌ ಸಭಾಧ್ಯಕ್ಷ ಸ್ಥಾನಕ್ಕೆ ಸಿಕ್ಕಂತಹ ಗೌರವ. ಯಾರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡಲ್ಲ. ಸಂವಿಧಾನಕ್ಕೆ ಅನುಗುಣವಾಗಿ ನಾನು ಕೆಲಸ ಮಾಡುತ್ತೇನೆ. ನಾನು ಎಲ್ಲರಿಗೂ ಗೌರವ ಕೊಟ್ಟು ಗೌರವ ಪಡೆಯುತ್ತೇನೆ. ಜಾತಿ, ಧರ್ಮ ಬಿಟ್ಟು ಸ್ಪೀಕರ್ ಸ್ಥಾನ ನೋಡಬೇಕು ಎಂದು ಯು.ಟಿ ಖಾದರ್ ಹೇಳಿದರು.

Key words: I am –everyone-speaker- UT Khader.