ವಿಪಕ್ಷನಾಯಕರಾಗಿ ಆಯ್ಕೆಯಾದ ಆರ್. ಅಶೋಕ್ ಗೆ ಶುಭ ಹಾರೈಸಿದ ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ನವೆಂಬರ್,18,2023(www.justkannada.in):  ವಿಪಕ್ಷನಾಯಕರನ್ನಾಗಿ ಆಯ್ಕೆಯಾಗಿರುವ ಶಾಸಕ ಆರ್.ಅಶೋಕ್ ಗೆ  ಡಿಸಿಎಂ ಡಿಕೆ ಶಿವಕುಮಾರ್ ಶುಭಹಾರೈಸಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ಅಶೋಕಣ್ಣನಿಗೆ ದೊಡ್ಡಸ್ಥಾನಮಾನ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ವಿಪಕ್ಷನಾಯಕಾಗಿ ಉತ್ತಮ ಕೆಲಸ ಮಾಡಲಿ ಎಂದು ಹಾರೈಸುವೆ. 7 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ವಿಪಕ್ಷನಾಯಕರಾಗಿ ಸರ್ಕಾರವನ್ನ ತಿದ್ದುವ ಕೆಲಸ ಮಾಡಲಿ.  ಅಶೋಕ್ ಅನುಭವದ ಭಂಡಾರವನ್ನ ಬಳಸಿಕೊಂಡು ಕೆಲಸಮಾಡಲಿ ಅಶೋಕ್ ಅಣ್ಣನಿಗೆ ಶುಭವಾಗಲಿ ಎಂದು ಹಾರೈಸುವೆ ಎಂದು ತಿಳಿಸಿದರು.

ಯತೀಂದ್ರ ಸಿದ್ದರಾಮಯ್ಯ ವಿರುದ್ದ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ವಿಜಯೇಂದ್ರ  ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷದ ನಾಯಕರು.  ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿ ಕೆಲಸ ಮಾಡಿದವರು. ಅವರು ಘನತೆಗೆ ತಕ್ಕಂತೆ ಮಾತನಾಡಬೇಕು.  ಮಾಜಿ ಸಿಎಂ ಮಾತಾಡ್ತಾರೆಂದ ಎಲ್ಲರೂ ಗಢಗಢ ನಡುಗಬೇಕು. ಪದೇ ಪದೇ ಮಾತನಾಡುವುದರಿಂದ ಉಪಯೋಗಿವಲ್ಲ. ಯತೀಂದ್ರ ಮಾಜಿ ಶಾಸಕರು ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ್ದಾರೆ.  ಕ್ಷೇತ್ರವನ್ನು ನೋಡಿಕೊಳ್ಳುಲು ಸಿಎಂ ಬಿಟ್ಟಿದ್ದಾರೆ.  ಹೀಗಾಗಿ ಯತೀಂದ್ರ ಸಿಎಂ ಕ್ಷೇತ್ರದ ಜನರ ಸಮಸ್ಯೆ ಆಲಿಸುತ್ತಿದ್ದಾರೆ.  ಆದರೆ ಕುಮಾರಸ್ವಾಮಿ ಅನಗತ್ಯವಾಗಿ ಮಾತನಾಡುತ್ತಿದ್ದಾರೆ  ಎಂದು ವಾಗ್ದಾಳಿ ನಡೆಸಿದರು.

Key words: DCM -DK Shivakumar -wished –Oposition Leader-R.Ashok