‘ನಮ್ಮ ರಕ್ತ ಕೊಟ್ಟೇವೂ ಆದರೆ ನೀರು ಕೊಡೆವು’: ಬಿಜೆಪಿ ಕಾರ್ಯಕರ್ತರಿಂದ ವಿಭಿನ್ನ ಹೋರಾಟ.

ಮಂಡ್ಯ,ಸೆಪ್ಟಂಬರ್,5,2023(www.justkannada.in):  ಕೆ ಆರ್​​ಎಸ್ ಜಲಾಶಯ ಭರ್ತಿಯಾಗದೇ  ರಾಜ್ಯದ ಜನರು ರೈತರು ನೀರಿಗೆ ಹಾಹಾಕಾರ ಪಡುವ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದ್ದರೂ ಸಹ ತಮಿಳುನಾಡಿಗೆ  ಕಾವೇರಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಕಾರ್ಯಕರ್ತರು ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.

ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ತಮಿಳುನಾಡಿಗೆ ನೀರು ಬಿಡದಂತೆ ರಕ್ತದಿಂದ  ಹೆಬ್ಬೆಟ್ಟು ಒತ್ತಿ ಚಳುವಳಿ ನಡೆಸಿದ್ದಾರೆ. ನಮ್ಮ ರಕ್ತ ಕೊಟ್ಟೆವೂ ಆದರೆ ನೀರು ಕೊಡೆವು ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನವಿ ಪತ್ರಕ್ಕೆ ರಕ್ತದಲ್ಲಿನ ಹೆಬ್ಬೆಟ್ಟಿನ ಸಹಿ ಒತ್ತಿ ಜಿಲ್ಲಾಧಿಕಾರಿಗೆ ಬಿಜೆಪಿ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಲಿದ್ದಾರೆ.

Key words: caveri water- tamilnadu- different –protest-BJP workers.