Monday, September 21, 2026

BDA Apartments

ಮೇ 4ರಿಂದ ರೈಲು, ವಿಮಾನ ಸೇವೆ ಪುನಾರಂಭ ಡೌಟ್ BDA JK_Adv BDA Adv
Home Front Page ಮೇ 4ರಿಂದ ರೈಲು, ವಿಮಾನ ಸೇವೆ ಪುನಾರಂಭ ಡೌಟ್

ಮೇ 4ರಿಂದ ರೈಲು, ವಿಮಾನ ಸೇವೆ ಪುನಾರಂಭ ಡೌಟ್

ನವದೆಹಲಿ, ಏಪ್ರಿಲ್ 19, 2020 (www.justkannada.in): ಎರಡನೇ ಸುತ್ತಿನ ಲಾಕ್ ಡೌನ್ ಮೇ 03 ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ ರೈಲು ಹಾಗೂ ವಿಮಾನ ಸೇವೆಗಳು ಪ್ರಾರಂಭವಾಗುವುದು ಬಹುತೇಕ ಅನುಮಾನಗೊಂಡಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ನಡೆದ ಗ್ರೂಪ್ ಆಫ್ ಮಿನಿಸ್ಟರ್ಸ್ ನ ಸಭೆಯಲ್ಲಿ ಭಾಗವಹಿಸಿದವರು ಈ ಬಗ್ಗೆ ಮಾಹಿತಿ ನೀಡಿದ್ದು, ಮೇ.03 ರಂದು ಲಾಕ್ ಡೌನ್ ತೆರವುಗೊಂಡರೂ ರೈಲು ಹಾಗೂ ವಿಮಾನಗಳ ಸೇವೆಗಳು ಲಭ್ಯವಿರುವುದಿಲ್ಲ.

ಮೇ. 15 ರಿಂದ ರೈಲು, ವಿಮಾನ ಸೇವೆಗಳು ಪ್ರಾರಂಭವಾಗುವಂತೆ ಸಲಹೆ ನೀಡಲಾಗಿದೆ ಎಂದು ಹೆಸರನ್ನು ಪ್ರಕಟಿಸಲು ಇಚ್ಛಿಸದ ಸಚಿವರೊಬ್ಬರು ಮಾಹಿತಿ ನೀಡಿದ್ದಾರೆ.  ಅಂತಿಮ ನಿರ್ಣಯವನ್ನು ಪ್ರಧಾನಿ ಮೋದಿ ಕೈಗೊಳ್ಳುತ್ತಾರೆ.