ದಾಖಲೆ ಮುರಿಯಲು ಪಾಕಿಸ್ತಾನದ ಅತೀ ಎತ್ತರದ ಕ್ರಿಕೆಟ್ ಆಟಗಾರ ರೆಡಿ!

ಲಾಹೋರ್‌, ನವೆಂಬರ್ 08, 2019 (www.justkannada.in): ಸಮಕಾಲೀನ ಕ್ರಿಕೆಟಿನ ಅತೀ ಎತ್ತರದ ಆಟಗಾರನೆಂಬ ದಾಖಲೆ ಪಾಕಿಸ್ಥಾನದ ವೇಗಿ ಮೊಹಮ್ಮದ್‌ ಇರ್ಫಾನ್‌ ಹೆಸರಲ್ಲಿದೆ.

ಇವರ ಎತ್ತರ 7 ಅಡಿ, 1 ಇಂಚು. ಆದರೀಗ ಇವರ ದಾಖಲೆಗೆ ಪಾಕಿಸ್ಥಾನಿ ಕ್ರಿಕೆಟಿಗನೇ ಸಂಚಕಾರ ತಂದಿದ್ದಾರೆ. ಆದರೆ ಇವರಿನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರವೇಶಿಸಿಲ್ಲ. ‘ಪಾಕಿಸ್ಥಾನ್‌ ಸೂಪರ್‌ ಲೀಗ್‌’ನಲ್ಲಿ ಲಾಹೋರ್‌ ಖಲಂದರ್ ತಂಡವನ್ನು ಪ್ರತಿನಿಧಿಸಲು ಆಹ್ವಾನ ಪಡೆದಿದ್ದಾರೆ.

21ರ ಹರೆಯದ ಸ್ಪಿನ್ನರ್‌ನ ಹೆಸರು ಮುಹಮ್ಮದ್‌ ಮುದಸ್ಸರ್‌. ಎತ್ತರ 7 ಅಡಿ, 5 ಇಂಚು! ಲಾಹೋರ್‌ನವರಾದ ಮುದಸ್ಸರ್‌ ಲಾಹೋರ್‌ ಖಲಂದರ್ ಹೈ ಪರ್ಫಾರ್ಮೆನ್ಸ್‌ ಸೆಂಟರ್‌’ನಲ್ಲಿ ಒಂದು ವರ್ಷ ಕಾಲ ತರಬೇತಿ ಪಡೆಯಲಿದ್ದು, ಮುಂದಿನ ಋತುವಿನಿಂದ ಪಿಎಸ್‌ಎಲ್‌ನಲ್ಲಿ ಆಡಲಿದ್ದಾರೆ.