ಐಪಿಎಲ್ ಪಂದ್ಯಾರಂಭಕ್ಕೂ ಮುನ್ನ ರಾಷ್ಟ್ರ ಗೀತೆ ನುಡಿಸಿ: ಕಿಂಗ್ಸ್ ಇಲೆವೆನ್ ಪಂಜಾಬ್ ಮಾಲೀಕರ ಒತ್ತಾಯ

ಹೊಸದಿಲ್ಲಿ, ನವೆಂಬರ್ 08, 2019 (www.justkannada.in): ಮುಂದಿನ ಐಪಿಎಲ್‌ ಆವೃತ್ತಿಯ ಪ್ರತಿ ಪಂದ್ಯದ ಆರಂಭಕ್ಕೆ ಮೊದಲು ರಾಷ್ಟ್ರಗೀತೆಯನ್ನು ನುಡಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಕ ನೆಸ್ ವಾಡಿಯಾ ಬಿಸಿಸಿಐಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಸಾಮಾನ್ಯವಾಗಿ ಪ್ರತಿ ಅಂತರ್‌ರಾಷ್ಟ್ರೀಯ ಪಂದ್ಯದ ಆರಂಭಕ್ಕೆ ಮೊದಲು ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ.

ವಿಶ್ವದ ನಂ.1 ಕ್ರಿಕೆಟ್ ಲೀಗ್ ಐಪಿಎಲ್‌ನಲ್ಲಿ ಇದನ್ನು ನಿಯಮವಾಗಿ ಅಳವಡಿಸಬೇಕು ಎಂದು ವಾಡಿಯಾ ಹೇಳಿದ್ದಾರೆ. ಐಪಿಎಲ್‌ನಲ್ಲಿ ಭಾರೀ ವೆಚ್ಚದ ಉದ್ಘಾಟನಾ ಸಮಾರಂಭವನ್ನು ರದ್ದುಪಡಿಸುವ ಬಿಸಿಸಿಐ ನಿರ್ಧಾರವನ್ನು ವಾಡಿಯಾ ಸ್ವಾಗತಿಸಿದ್ದಾರೆ.