ಬೆಂಗಳೂರಿನಲ್ಲಿ ಮತ್ತಷ್ಟು ಟೆಸ್ಟಿಂಗ್ ಲ್ಯಾಬ್: ಆ್ಯಂಬುಲೆನ್ಸ್ ಕೊರತೆ ಆಗದಂತೆ ಕ್ರಮ- ಆರೋಗ್ಯ ಸಚಿವ ಶ್ರೀರಾಮುಲು….

ಬೆಂಗಳೂರು,ಜು,2,2020(www.justkannada.in): ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು ಬೆಂಗಳೂರಿನಲ್ಲಿ ಮತ್ತಷ್ಟು ಲ್ಯಾಬ್ ತೆರೆಯುತ್ತೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ಬೆಂಗಳೂರಿನಲ್ಲಿ ಟೆಸ್ಟಿಂಗ್ ಲ್ಯಾಬ್ ಜಾಸ್ತಿ ಇವೆ. ಆದರೆ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಲೋಡ್ ಜಾಸ್ತಿಯಾಗುತ್ತಿದೆ. ಹೀಗಾಗಿ ನಗರದಲ್ಲಿ ಮತ್ತಷ್ಟು ಲ್ಯಾಬ್ ತೆರೆಯಲು ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.testing-lab-bangalore-health-minister-sriramulu

ಹಾಗೆಯೇ ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್ ಗಳಿಗೆ ಕೊರತೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಇಲ್ಲಿನ ಪ್ರತಿ ವಾರ್ಡ್ ಗೆ ಎರಡು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು ಇದೇ ವೇಳೆ ರೋಗಿಗಳನ್ನ ಚಿಕಿತ್ಸೆಗೆ ಸೇರಿಸಿಕೊಳ್ಳದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಆಸ್ಪತ್ರೆಗೆ ಕರೆ ಮಾಡಿ ಸೇರಿಸಿ ಕೊಳ್ಳಿ ಎಂದು ಹೇಳಿದ್ದೆ. ಮುಂದೆ ಇತರೇ ರೋಗಿಗಳಿಗೆ ತೊಂದರೇ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Key words: Testing Lab – Bangalore-Health Minister- Sriramulu