Monday, September 21, 2026

BDA Apartments

Home Front Page ಸಿಎಂ ಸ್ಥಾನಕ್ಕೆ ಹೆಚ್.ಡಿ ರೇವಣ್ಣ ಕೂಡ ಅರ್ಹರು ಎಂಬ ಸಿದ್ದರಾಮಯ್ಯ ಟ್ವಿಟ್ ಗೆ ಸಚಿವ ಹೆಚ್.ಡಿ...

ಸಿಎಂ ಸ್ಥಾನಕ್ಕೆ ಹೆಚ್.ಡಿ ರೇವಣ್ಣ ಕೂಡ ಅರ್ಹರು ಎಂಬ ಸಿದ್ದರಾಮಯ್ಯ ಟ್ವಿಟ್ ಗೆ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯಿಸಿದ್ದು ಹೀಗೆ…?

ಹಾಸನ,ಮೇ,16,2019(www.justkannada.in):  ಸಿಎಂ ಸ್ಥಾನಕ್ಕೆ ಹೆಚ್.ಡಿ ರೇವಣ್ಣ ಕೂಡ ಅರ್ಹರು ಎಂಬ ಸಿದ್ದರಾಮಯ್ಯ ಟ್ವಿಟ್  ಕುರಿತು ಪ್ರತಿಕ್ರಿಯಿಸಿರುವ ಸಚಿವ ಹೆಚ್.ಡಿ ರೇವಣ್ಣ, ಸಿದ್ದರಾಮಯ್ಯ ನನ್ನ ಮೇಲಿನ ಗೌರವಕ್ಕೆ ಆ ರೀತಿ ಹೇಳಿರಬಹುದು. ಹೆಚ್.ಡಿ ಕುಮಾರಸ್ವಾಮಿ ಇರುವವರೆಗೂ ಸಿಎಂ ಸ್ಥಾನಕ್ಕೆ ನಾನು ಪೈಪೋಟಿಗೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಾಸನದಲ್ಲಿ ಇಂದು ಮಾತನಾಡಿದ ಸಚಿವ ಹೆಚ್.ಡಿ ರೇವಣ್ಣ, ಸಿದ್ದರಾಮಯ್ಯ ಹಿಂದಿನಿಂದಲೂ  ನನ್ನ ಹಿತೈಷಿ. ನಾನು ಅವರ ಅಭಿಮಾನಿ. ನನ್ನ ಮೇಲಿನ ಗೌರವದಿಂದ ಹಾಗೆ ಹೇಳಿದ್ದಾರೆ.  ಅವರ ಹೇಳಿಕೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಇನ್ನು  ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿರುವಾಗ  ನನ್ನ ಪ್ರಶ್ನೆ ಎಲ್ಲಿ ಬರುತ್ತೆ. ಕುಮಾರಸ್ವಾಮಿ ಇರುವವರೆಗೂ ನಾನು ಪೈಪೋಟಿ ನೀಡಲ್ಲ. ನಾವು ಅಣ್ಣತಮ್ಮಂದಿರಿಬ್ಬರು ಹೊಡೆದಾಡಲ್ಲ ಎಂದು ಹೆಚ್.ಡಿ ರೇವಣ್ಣ ತಿಳಿಸಿದ್ದಾರೆ. ಖರ್ಗೆ ಸಿಎಂ ಆಗಬೇಕಿತ್ತು ಎಂದು ಹೇಳಿಕೆ ನೀಡಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ  ಸಿಎಂ ಸ್ಥಾನದ ಅರ್ಹತೆಗೆ ಬಹಳ ಜನರಿದ್ದಾರೆ. ಅವರಲ್ಲಿ ಹೆಚ್.ಡಿ ರೇವಣ್ಣ ಕೂಡ ಒಬ್ಬರು ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು  ಹೇಳಿದ್ದರು.

Key words: Minister -HD revanna-Siddaramaiah -Twitter –also- eligible -cm