ರಾಜ್ಯ ವಿಧಾನಸಭಾ ಚುನಾವಣಾ ಮತದಾನ ಅಂತ್ಯ:  ಸಮೀಕ್ಷೆಗಳ ಪ್ರಕಾರ ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನ..?

ಬೆಂಗಳೂರು,ಮೇ,10,2023(www.justkannada.in): ರಾಜ್ಯ ವಿಧಾನಸಭೆಗೆ ಇಂದು ನಡೆದ ಮತದಾನ ಮುಕ್ತಾಯವಾಗಿದ್ದು, ಮತದಾರರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.  ಮೇ 13 ರಂದು ಫಲಿತಾಂಶ ಹೊರಬೀಳಲಿದ್ದು ರಾಜ್ಯದ ಅಧಿಕಾರದ ಗದ್ದುಗೆಯನ್ನ ಯಾರು ಹಿಡಿಯಲಿದ್ದಾರೆ ಎಂಬುದು ತಿಳಿಯಲಿದೆ.

ಈ ನಡುವೆ ಮತದಾನದ ನಂತರ ಇದೀಗ ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ. ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನ ಎಂಬ ಬಗ್ಗೆ ಸಮೀಕ್ಷೆ ನಡೆದಿದ್ದು, REPUBLIC ಸಮೀಕ್ಷೆ ಪ್ರಕರಾ ಬಿಜೆಪಿಗೆ  85ರಿಂದ 100 ಕಾಂಗ್ರೆಸ್  ಗೆ 94 ರಿಂದ 108 ಜೆಡಿಎಸ್  ಗೆ 24ರಿಂದ 38 ಇತರೇ 2ರಿಂದ 6 ಸ್ಥಾನಗಳು ಲಭಿಸಲಿದೆ.

ಸಿ ವೋಟರ್ ಪ್ರಕಾರ ಬಿಜೆಪಿ 83 ರಿಂದ 95 ಕಾಂಗ್ರೆಸ್ 100 ರಿಂದ 112  ಜೆಡಿಎಸ್ 21 ರಿಂದ 29  ಇತರೇ 2ರಿಂದ 6 ಸ್ಥಾನಗಳಿಸಲಿವೆ.

ಜೀ ನ್ಯೂಸ್ ಸಮೀಕ್ಷೆ ಪ್ರಕಾರ ಬಿಜೆಪಿ 79 ರಿಂದ 94, ಕಾಂಗ್ರೆಸ್  103ರಿಂದ 118, ಜೆಡಿಎಸ್ 25ರಿಂದ 33 ಇತರೇ 2 ರಿಂದ 5 ಸ್ಥಾನ ಗಳಿಸಲಿವೆ.  ಜನ್‌ಕೀ ಬಾತ್‌ ಸಮೀಕ್ಷೆಯಂತೆ ಬಿಜೆಪಿಗೆ ಬಹುಮತ ಸಾಧ್ಯತೆ ಇದೆ. ಸಮೀಕ್ಷೆ ಪ್ರಕಾರ, ಬಿಜೆಪಿಗೆ 94-117 ಸ್ಥಾನ ಸಿಗುವ ಸಾಧ್ಯತೆ ಇದ್ದು, ಕಾಂಗ್ರೆಸ್​ಗೆ 91-106 ಸ್ಥಾನಗಳು ಸಿಗುವ ಸಾಧ್ಯತೆ ಇದೆ.

-V.Mahesh kumar

Key words: State Assembly election-exit poll-congress-jds-bjp