ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಾಪರಿನಿರ್ವಾಣ ದಿನ : ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರಿಂದ ಸ್ಮರಣೆ

ನವದೆಹಲಿ,ಡಿಸೆಂಬರ್,06,2020(www.justkannada.in) ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು, ರಾಜಕೀಯ ನಾಯಕರು, ಶ್ರೀಮಾನ್ಯರು ಅವರನ್ನು ಸ್ಮರಿಸಿ ಗೌರವ ಸಲ್ಲಿಸುತ್ತಿದ್ದಾರೆ.

logo-justkannada-mysore

ಮಹಾಪರಿನಿರ್ವಾಣ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ಅವರನ್ನು ಸ್ಮರಿಸಿದ್ದು, ಅಂಬೇಡ್ಕರ್ ಅವರ ಆಲೋಚನೆ ಮತ್ತು ಅಭಿಪ್ರಾಯಗಳು ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತದೆ. ನಮ್ಮ ದೇಶದ ಬಗ್ಗೆ ಇಟ್ಟಿರುವ ಕನಸನ್ನು ಈಡೇರಿಸಲು ನಾವು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.

 Dr.Babasaheb Ambedkar,great,day,memory,dignitaries,including,Prime,Minister,Narendra Modi

ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಾಬಾಸಾಹೇಬ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಮೋದಿ ಸರ್ಕಾರ ಸಮಾಜದ ಏಳಿಗೆಗಾಗಿ, ದಶಕಗಳಿಂದ ತುಳಿತಕ್ಕೊಳಗಾದವರ ಅಭಿವೃದ್ಧಿಗಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಸ್ಮರಿಸಿದ್ದಾರೆ.

Dr.Babasaheb Ambedkar-great-day-memory-dignitaries-including-Prime-Minister-Narendra Modi

key words : Dr.Babasaheb Ambedkar-great-day-memory-dignitaries-including-Prime-Minister-Narendra Modi