Friday, August 21, 2026

BDA Apartments

Home Front Page ಟಿ20 ವಿಶ್ವಕಪ್ ಇಂಡಿಯಾ ಥೀಮ್ ಸಾಂಗ್: ಐಸಿಸಿ ವಿರುದ್ಧ ಕೊಹ್ಲಿ ಫ್ಯಾನ್ಸ್ ಗರಂ

ಟಿ20 ವಿಶ್ವಕಪ್ ಇಂಡಿಯಾ ಥೀಮ್ ಸಾಂಗ್: ಐಸಿಸಿ ವಿರುದ್ಧ ಕೊಹ್ಲಿ ಫ್ಯಾನ್ಸ್ ಗರಂ

ಬೆಂಗಳೂರು, ಅಕ್ಟೋಬರ್ 20, 2022 (www.justkannada.in): ಟಿ20 ವಿಶ್ವಕಪ್​ ಗಾಗಿ ಐಸಿಸಿ ಟೀಂ ಇಂಡಿಯಾ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು, ಕೊಯ್ಲಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ವಿಡಿಯೋದಲ್ಲಿ ನಾಯಕ ರೋಹಿತ್, ಉಪನಾಯಕ ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಹಾಗೂ ಚಹಾಲ್ ಕಾಣಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ವಿಡಿಯೋದಲ್ಲಿ ಇಲ್ಲದಿರುವುದು ಇದೀಗ ಎಲ್ಲರ ಬೇಸರಕ್ಕೆ ಕಾರಣವಾಗಿದೆ.

ಹೀಗಾಗಿ ಕೊಯ್ಲಿ ಅಭಿಮಾನಿಗಳು ಐಸಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಯ್ಲಿಯನ್ನು ಐಸಿಸಿ ಕಡೆಗಣಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.