ಅಪ್ಪು ಪುಣ್ಯ ಸ್ಮರಣೆ: 3 ಸಾವಿರ ಜನರಿಗೆ ಬಾಡೂಟ

ಬೆಂಗಳೂರು, ಅಕ್ಟೋಬರ್ 20, 2022 (www.justkannada.in): ಶಿವಮೊಗ್ಗದ ವಿದ್ಯಾನಗರದ ಯಾಲಕಪ್ಪನಕೇರಿಯ ಶ್ರೀ ವೀರಕೇಸರಿ ಯುವಕರ ಸಂಘದ ವತಿಯಿಂದ ನಟ ಪುನೀತ್ ರಾಜಕುಮಾರ್ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.

ಮೊದಲ ಪುಣ್ಯ ಸ್ಮರಣೆ ಅಂಗವಾಗಿ ಸುಮಾರು 3 ಸಾವಿರ ಜನರಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.

ನಾಲ್ಕು ಕುರಿ, 2 ಕ್ವಿಂಟಾಲ್ ಚಿಕನ್, ಮೊಟ್ಟೆ ಬಳಸಿ ಬಾಡೂಟ ತಯಾರಿಸಲಾಗಿತ್ತು. ವಿದ್ಯಾನಗರದ ಮನೆಗಳು, ಮುಖ್ಯ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ ಊಟ ಬಡಿಸಲಾಯಿತು.

ನಟ ಪುನೀತ್ ರಾಜಕುಮಾರ್ ಅವರನ್ನು ಪ್ರತಿ ವರ್ಷ ಇದೆ ರೀತಿ ಸ್ಮರಣೆ ಮಾಡಿಕೊಳ್ಳುತ್ತೇವೆ ಎಂದು ಶ್ರೀ ವೀರಕೇಸರಿ ಯುವಕರ ಸಂಘದ ಹರೀಶ್ ತಿಳಿಸಿದರು.