ಟಿ-20 ವಿಶ್ವಕಪ್ ಕ್ರಿಕೆಟ್: ಟೀಂ ಇಂಡಿಯಾ ಕುರಿತ ಕಪಿಲ್ ದೇವ್ ಭವಿಷ್ಯ

ಬೆಂಗಳೂರು, ಅಕ್ಟೋಬರ್ 20, 2022 (www.justkannada.in): ಟೀಮ್ ಇಂಡಿಯಾ ಈಗ ವಿಶ್ವಕಪ್‌ ನಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ. ಇದೇ ವೇಳೆ ಭಾರತ ತಂಡ ಸೆಮಿಫೈನಲ್‌ ಗೇರುವ ಸಾಧ್ಯತೆ ಕೇವಲ 30 ಶೇಕಡಾ ಎಂದಿದ್ದಾರೆ ಕಪಿಲ್ ದೇವ್.

ಈ ಭಾನುವಾರ ಪಾಕಿಸ್ತಾನದ ವಿರುದ್ಧ ಬಾರತ ತಂಡ ಸೆಣೆಸಾಡುವ ಮೂಲಕ ಈ ಬಾರಿಯ ವಿಶ್ವಕಪ್ ಟೂರ್ನಿಯ ಅಭಿಯಾನ ಆರಂಭಿಸಲಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಇತ್ತೀಚೆಗೆ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದು ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದರೆ ಎರಡನೇ ಮುಖಾಮುಖಿಯಲ್ಲಿ ಪಾಕಿಸ್ತಾನ ಗೆದ್ದುಕೊಂಡಿತ್ತು.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಅಗ್ರ ನಾಲ್ಕು ತಂಡಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಬಹಳ ಕಡಿಮೆಯಿದೆ ಎಂದು ಮಾಜಿ ನಾಯಕ ಕಪಿಲ್ ದೇವ್ ಭವಿಷ್ಯ ನುಡಿದಿದ್ದಾರೆ.