Monday, September 21, 2026

BDA Apartments

ಪ.ಬಂಗಾಳದಲ್ಲಿ ಸುವೆಂದು ಅಧಿಕಾರಿಯ ಪಿಎ ಹತ್ಯೆ ಕೇಸ್: ತನಿಖೆಗೆ ‘SIT’ ರಚನೆ BDA JK_Adv...
Home Crime ಪ.ಬಂಗಾಳದಲ್ಲಿ ಸುವೆಂದು ಅಧಿಕಾರಿಯ ಪಿಎ ಹತ್ಯೆ ಕೇಸ್: ತನಿಖೆಗೆ  ‘SIT’ ರಚನೆ

ಪ.ಬಂಗಾಳದಲ್ಲಿ ಸುವೆಂದು ಅಧಿಕಾರಿಯ ಪಿಎ ಹತ್ಯೆ ಕೇಸ್: ತನಿಖೆಗೆ  ‘SIT’ ರಚನೆ

ಕೋಲ್ಕತ್ತಾ,ಮೇ,7,2026 (www.justkannada.in):  ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (PA) ಚಂದ್ರನಾಥ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎಸ್ ಐಡಿ ರಚನೆ ಮಾಡಲಾಗಿದೆ.

ಕೆಲವು ದಿನಗಳ ಹಿಂದೆ ಸುವೇಂದು ಅಧಿಕಾರಿ ಅವರ ಪಿಎ ಚಂದ್ರನಾಥ್ ಅವರ ಮೃತದೇಹವು ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಆತ್ಮಹತ್ಯೆ ಎಂಬ ಮಾತುಗಳು ಕೇಳಿಬಂದಿದ್ದರೂ, ಅವರ ಕುಟುಂಬಸ್ಥರು ಮತ್ತು ಬಿಜೆಪಿ ನಾಯಕರು ಇದೊಂದು ವ್ಯವಸ್ಥಿತ ಹತ್ಯೆ ಎಂದು ಗಂಭೀರವಾಗಿ ಆರೋಪಿಸಿದ್ದರು.

ಚಂದ್ರನಾಥ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರವು ಈಗ ತನಿಖೆಯನ್ನು ಚುರುಕುಗೊಳಿಸಲು ವಿಶೇಷ ತನಿಖಾ ತಂಡವನ್ನು (SIT) ರಚನೆ ಮಾಡಿದೆ.

Key words: Suvendu Adhikari, PA, murder case, West Bengal