Sunday, August 23, 2026

BDA Apartments

Home Front Page 118 ಶಾಸಕರ ಸಹಿಯೊಂದಿಗೆ ಬನ್ನಿ: ಮೊದಲು ಬಹುಮತ ಸಾಬೀತುಪಡಿಸಿ- ವಿಜಯ್ ಗೆ ರಾಜ್ಯಪಾಲರ ಸೂಚನೆ

118 ಶಾಸಕರ ಸಹಿಯೊಂದಿಗೆ ಬನ್ನಿ: ಮೊದಲು ಬಹುಮತ ಸಾಬೀತುಪಡಿಸಿ- ವಿಜಯ್ ಗೆ ರಾಜ್ಯಪಾಲರ ಸೂಚನೆ

ಚೆನ್ನೈ,ಮೇ,7,2026 (www.justkannada.in): ತಮಿಳುನಾಡಿನಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ರಾಜಕೀಯ ನಾಯಕ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಲು ತೀವ್ರ ಕಸರತ್ತು ನಡೆಸುತ್ತಿದೆ.

ಈ ಮಧ್ಯೆ ನಿನ್ನೆ ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದ ಟಿವಿಕೆ ಮುಖ್ಯಸ್ಥ ವಿಜಯ್ ಇಂದು ಸಹ ಚೆನ್ನೈ ಲೋಕಭವನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಭೇಟಿಯಾಗಿದ್ದಾರೆ. ಆದರೆ ರಾಜ್ಯಪಾಲರು ಮೊದಲು ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೊದಲು ಪ್ರಮಾಣ ವಚನ ನಂತರ ಬಹುಮತ ಸಾಬೀತು ಮಾಡುವುದಾಗಿ ಹೇಳಿದ ವಿಜಯ್ ಮಾತಿಗೆ ಒಪ್ಪದ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್, 118 ಶಾಸಕರ ಸಹಿಯೊಂದಿಗೆ ಬನ್ನಿ ಮೊದಲು ಬಹುಮತ ಸಾಬೀತು ಮಾಡಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

Key words: 118 MLAs, Prove, majority, Tamilnadu, Governor, TVK, Vijay