Tuesday, September 29, 2026

BDA Apartments

ಸುಶಾಂತ್ ಆತ್ಮಹತ್ಯೆ ಪ್ರಕರಣ: ಮತ್ತೊಬ್ಬ ಪೆಡ್ಲರ್ ಎನ್ಸಿಬಿ ಬಲೆಗೆ BDA JK_Adv BDA Adv
Home Cinema ಸುಶಾಂತ್ ಆತ್ಮಹತ್ಯೆ ಪ್ರಕರಣ: ಮತ್ತೊಬ್ಬ ಪೆಡ್ಲರ್ ಎನ್ಸಿಬಿ ಬಲೆಗೆ

ಸುಶಾಂತ್ ಆತ್ಮಹತ್ಯೆ ಪ್ರಕರಣ: ಮತ್ತೊಬ್ಬ ಪೆಡ್ಲರ್ ಎನ್ಸಿಬಿ ಬಲೆಗೆ

ಬೆಂಗಳೂರು, ಜೂನ್ 03, 2021 (www.justkannada.in):

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆಸಂಬಂಧಿಸಿದಂತೆ ಎನ್‌ಸಿಬಿ ಪೊಲೀಸರು ಪೆಡ್ಲರ್ ಹರೀಶ್ ಖಾನ್‌ರನ್ನು ಬಂಧಿಸಿದ್ದಾರೆ.

ಎನ್‌ಸಿಬಿ ಪೊಲೀಸರ ಕಾರ್ಯಾಚರಣೆ ವೇಳೆ ಹರೀಶ್ ಖಾನ್ ಸಿಕ್ಕಿಬಿದ್ದಿದ್ದಾನೆ. ಸುಶಾಂತ್ ಸಾವಿನ ಪ್ರಕರಣದಲ್ಲಿ ಈತನಿಗೂ ಸಂಬಂಧ ಇದೆ ಎಂದು ಶಂಕಿಸಲಾಗಿದೆ.

ಹರೀಶ್‌ ಖಾನ್‌ಗೆ ಚಿಂಕು ಪಠಾಣ್ ಜೊತೆ ಸಂಬಂಧವಿರುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಬಂಧಿತ ಹರೀಶ್ ಖಾನ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬೆಂಬಲಿಗ ಎನ್ನಲಾಗಿದೆ.

ಈ ಮೊದಲು ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ, ಶೌವಿಕ್ ಚಕ್ರವರ್ತಿ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ನಂತರ ಜಾಮೀನು ಪಡೆದು ಹೊರಬಂದಿದ್ದರು.