ವದಂತಿಗೆಗಳಿಗೆ ಬ್ರೇಕ್, ಮದುವೆ ಕುರಿತ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದ ನಟಿ ಪ್ರೇಮಾ

ಬೆಂಗಳೂರು, ಜೂನ್ 03, 2021 (www.justkannada.in):  2ನೇ ಮದುವೆ ಕುರಿತು ಹರಿದಾಡುತ್ತಿದ್ದ ವದಂತಿಗೆಗಳಿಗೆ ನಟಿ ಪ್ರೇಮಾ ಸ್ಪಷ್ಟನೆ ನೀಡಿದ್ದಾರೆ.

ನಕಲಿ ಸುದ್ದಿ ಹರಡಿದ ವೆಬ್​ಸೈಟ್​ನ ಸ್ಕ್ರೀನ್ ಶಾಟ್ ಅನ್ನು​ ಪ್ರೇಮಾ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದಿದ್ದಾರೆ.

ನಟಿ ಪ್ರೇಮಾ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಜತೆಗೆ ಸೋಷಿಯಲ್ ಮೀಡಿಯಾಗಳಿಂದಲು ಅವರು ಬಲು ದೂರ ಆದರೂ ಸುಳ್ಳು ಸುದ್ದಿಯೊಂದು ಸಾಕಷ್ಟು ಸದ್ದು ಮಾಡಿತ್ತು.

ಅಭಿಮಾನಿಗಳು ಇಂತಹ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಕೋರಿದ್ದಾರೆ. ಈ ಮೂಲಕ ಅವರ ಬಗ್ಗೆ ಹರಿದಾಡುತ್ತಿದ್ದ ಸುಳ್ಳು ಸುದ್ದಿಗೆ ಬ್ರೇಕ್​ ಹಾಕಿದ್ದಾರೆ.