Tuesday, September 29, 2026

BDA Apartments

ಚಾಮರಾಜನಗರ ಜಿಲ್ಲೆಯ ವಿಶೇಷಚೇತನ ಮಕ್ಕಳಿಗೆ ನೆರವಾದ ಕಿಚ್ಚ ಸುದೀಪ್ BDA JK_Adv BDA Adv
Home Cinema ಚಾಮರಾಜನಗರ ಜಿಲ್ಲೆಯ ವಿಶೇಷಚೇತನ ಮಕ್ಕಳಿಗೆ ನೆರವಾದ ಕಿಚ್ಚ ಸುದೀಪ್

ಚಾಮರಾಜನಗರ ಜಿಲ್ಲೆಯ ವಿಶೇಷಚೇತನ ಮಕ್ಕಳಿಗೆ ನೆರವಾದ ಕಿಚ್ಚ ಸುದೀಪ್

ಬೆಂಗಳೂರು, ಜೂನ್ 03, 2021 (www.justkannada.in): ಕಿಚ್ಚ ಸುದೀಪ್ ವಿಶೇಷ ಚೇತನ ಮಕ್ಕಳ ನೆರವಿಗೆ ಕಿಚ್ಚ ಮುಂದಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ವಸತಿ ಶಾಲೆ ಮಕ್ಕಳ ನೆರವಿಗೆ ಕಿಚ್ಚ ಧಾವಿಸಿದ್ದಾರೆ. ಮಳೆಯಿಂದ ಶಾಲೆ ಕಟ್ಟಡ ಸೋರುತ್ತಿತ್ತು. ಲಾಕ್ ಡೌನ್ ನಿಂದ ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ವಿಷಯ ತಿಳಿದ ಕಿಚ್ಚ ಟ್ರಸ್ಟ್ 40 ಕ್ಕೂ ಹೆಚ್ಚು ಮಕ್ಕಳಿರುವ ಈ ಶಾಲೆಗೆ ನೆರವು ನೀಡಿದೆ.

ಕಿಚ್ಚ ಸುದೀಪ್ ಚಾರಿಟೇಬಲ್ ರಾಜ್ಯ ಮುಖಂಡ ರಮೇಶ್ ಕಿಟ್ಟಿ ಹಾಗೂ ಜಿಲ್ಲಾ ಮುಖಂಡರಾದ ಸೋಮ ನಾಯಕ, ಪರಶಿವ ಅವರ ತಂಡ ಶಾಲೆಗೆ ಭೇಟಿ ನೀಡಿ, ಆಹಾರದ ಕಿಟ್ ವಿತರಿಸಿದೆ. ಜತೆಗೆ ವಸತಿ ಶಾಲೆಯ ಮೂಲ ಸೌಕರ್ಯ ಅಭಿವೃದ್ಧಿ ಮಾಡಲೂ ನೆರವು ನೀಡುವುದಾಗಿ ತಿಳಿಸಿದ್ದಾರೆ.