ಅಪರೇಷನ್ ಕಮಲ ಕುರಿತು ಬಿಎಸ್ ವೈ ಆಡಿಯೋ ವಿಚಾರ ಸಾಕ್ಷವಾಗಿ ಪರಿಗಣಿಸಲು ಸುಪ್ರೀಂಕೋರ್ಟ್ ಒಪ್ಪಿಗೆ…

ನವದೆಹಲಿ,ನ,5,2019(www.justkannada.in):  ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ  ಅನರ್ಹ ಶಾಸಕರ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದ್ದ  ಆಡಿಯೋವನ್ನ ಸಾಕ್ಷಿಯಾಗಿ ಪರಿಗಣಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.

ಇಂದು ಸುಪ್ರೀಂಕೋರ್ಟ್‌ ನಲ್ಲಿ ಕಾಂಗ್ರೆಸ್‌ ಪರ ವಕೀಲ ಕಪಿಲ್‌ ಸಿಬಲ್‌, ಅಪರೇಷನ್ ಕಮಲ ಕುರಿತ ಸಿಎಂ ಬಿಎಸ್ ವೈ ಆಡಿಯೋ ವಿಚಾರವನ್ನ ಪ್ರಸ್ತಾಪಿಸಿದರು. ಅನರ್ಹ ಶಾಸಕರ ವಿಚಾರ ಬಿಜೆಪಿ ಸಭೆಯಲ್ಲಿ ಪ್ರಸ್ತಾಪವಾಗಿದೆ. ಶಾಸಕರ ರಾಜೀನಾಮೆಗೆ ಯಾರು ಕಾರಣ ಅಂತಾ ಸಿಎಂ ಬಿಎಸ್ ವೈ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಆಡಿಯೋವನ್ನ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ವಾದ ಮಂಡಿಸಿದರು.

ಇದಕ್ಕೆ  ಸಿಎಂ ಬಿಎಸ್ ಯಡಿಯೂರಪ್ಪ ಪರ ವಕೀಲ ಸುಂದರಂ ಆಕ್ಷೇಪ ವ್ಯಕ್ತಪಡಿಸಿ ಯಡಿಯೂರಪ್ಪನವರು ಈ ಆಡಿಯೋದಲ್ಲಿನ ಮಾಹಿತಿಯನ್ನು ತಳ್ಳಿ ಹಾಕಿದ್ದಾರೆ. ಈ ಆಡಿಯೋವನ್ನ ನಿರಾಕರಿಸಿದ್ದಾರೆ ಎಂದರು.  ನಂತರ ಜೆಡಿಎಸ್ ಪರ ವಕೀಲ ರಾಜೀವ್ ಧವನ್ ಆಡಿಯೋವನ್ನ ಪರಿಶೀಲಿಸುವಂತೆ ಮನವಿ ಮಾಡಿದರು.

ಇದಾದ ನಂತರ ನ್ಯಾಯಮೂರ್ತಿ ರಮಣ ನೇತೃತ್ವದ ತ್ರಿಸದಸ್ಯ ಪೀಠ, ಶಾಸಕರ ಅನರ್ಹತೆಯ ಕುರಿತ ವಿಚಾರಣೆ ಪ್ರಕರಣದಲ್ಲಿ ಬಿಎಸ್ ಯಡಿಯೂರಪ್ಪ ಆಡಿಯೋವನ್ನು ಸಾಕ್ಷ್ಯವನ್ನಾಗಿ ಪರಿಗಣಿಸುತ್ತೇವೆ ಎಂದು ಹೇಳಿದೆ.

Keywords:  Supreme Court -agrees -consider –CM BS Yeddyurappa -audio