619 ಕೋಟಿ ನಿರ್ಭಯಾ ಸೇಫ್ ಸಿಟಿ ಟೆಂಡರ್ ಬಿಡ್ಡಿಂಗ್ ಶಿಸ್ತುಬದ್ಧ, ಪಾರದರ್ಶಕ :ಐಜಿಪಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ…!

ಬೆಂಗಳೂರು,ಡಿಸೆಂಬರ್,27,2020(www.justkannada.in) : ಬಿಡ್ಡಿಂಗ್ ಶಿಸ್ತುಬದ್ಧವಾಗಿ, ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇದರಲ್ಲಿ ಗೊಂದಲ ಇಲ್ಲ. ಇಲ್ಲಿ ಯಾವುದೇ ಪಕ್ಷಪಾತ ಪ್ರಕ್ರಿಯೆ ಇಲ್ಲ. ಎಲ್ಲವೂ ಪಾರದರ್ಶಕ ಎಂದು ಪೊಲೀಸ್ ಆಡಳಿತ ವಿಭಾಗದ ಐಜಿಪಿ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.Teachers,solve,problems,Government,bound,Minister,R.Ashok

619 ಕೋಟಿ ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಕೇಸ್ ಗೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಡಿ.ರೂಪಾ ಮಾಡಿದ್ದ ಆರೋಪಗಳಿಗೆ ಸುದ್ದಿಗೋಷ್ಠಿ ಸ್ಪಷ್ಟನೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಇದರಲ್ಲಿ ಗೊಂದಲ ಇಲ್ಲ. ಇಲ್ಲಿ ಯಾವುದೇ ಪಕ್ಷಪಾತ ಪ್ರಕ್ರಿಯೆ ಇಲ್ಲ. ಎಲ್ಲವೂ ಪಾರದರ್ಶಕ. ನನ್ನ ಮೇಲಿನ ಆರೋಪ ವಿಚಾರ ನ್ಯಾಯಾಲಯದಲ್ಲಿ ಇದೆ. ಹೀಗಾಗಿ, ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಕಾಲ್ ಒನ್ ನಲ್ಲಿ ಬಿಇಎಲ್ ಟೆಂಡರ್ ಹಾಕಿರಲಿಲ್ಲ. ಬಿಡ್ಡಿಂಗ್ ನಲ್ಲಿ ಮೂರು ಕಂಪನಿಗಳು ಭಾಗಿಯಾಗಿದ್ದವು. ಆ ಕಂಪನಿಗಳು ಮೊದಲ ಹಂತದಲ್ಲಿ ಕ್ವಾಲಿಫೈ ಆಗಿರಲಿಲ್ಲ. ಬಳಿಕ ಜೂನ್ 20ರಂದು 3 ಕಂಪನಿಗಳು ಕ್ವಾಲಿಫೈ ಆಗಿದ್ದವು ಎಂದಿದ್ದಾರೆ.

ಬೆಂಗಳೂರಿನಲ್ಲಿ ನಿರ್ಭಯಾ ಹೆಸರಿನ ಸೇಫ್ ಸಿಟಿ ಪ್ರಾಜೆಕ್ಟ್ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಊಹೆಗಳು ಹರಿದಾಡ್ತಿವೆ. ಟೆಂಡರ್ ಪ್ರಕ್ರಿಯೆ ಅನ್ ಫೇರ್ ಎಂದು ಟೀಕಿಸುತ್ತಿದ್ದಾರೆ. ಆದರೆ, ಸರ್ಕಾರವು ಅಪೆಕ್ಸ್ ಕಮಿಟಿ(ಉನ್ನತ ಸಮಿತಿ), ಟೆಂಡರ್ ಇನ್ ವೈಟಿಂಗ್(ಟೆಂಡರ್ ಆಹ್ವಾನ), ಟೆಂಡರ್ ಸ್ಕ್ರೂಟನಿಂಗ್(ಟೆಂಡರ್ ದಾಖಲೆಗಳ ಪರಾಮರ್ಶೇ) 3ಹಂತಗಳಲ್ಲಿ ಕಮಿಟಿ ಸಮಿತಿಗಳನ್ನು ರಚಿಸಿತ್ತು ಎಂದು ಮಾಹಿತಿ ನೀಡಿದ್ದಾರೆ.

2ನೇ ಕಾಲ್ ನಲ್ಲಿ ಎಲ್ ಅಂಡ್ ಟಿ, ಮ್ಯಾಟ್ರಿಕ್ಸ್, ಬಿಇಎಲ್ ಕ್ವಾಲಿಫೈ ಆದವು. ಆದರೆ, ಚೀನಾ ವಸ್ತುಗಳು ಬಳಸದಂತೆ ಕೇಂದ್ರ ಸರ್ಕಾರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ನವೆಂಬರ್ ನಲ್ಲಿ ಬಿಡ್ಡಿಂಗ್ ಕರೆಯಲಾಗುವುದು. ಜನವರಿ 8ರವರಗೆ ಇದು ಚಾಲ್ತಿಯಲ್ಲಿರುತ್ತದೆ.

619 crore-Nirbhaya-Safe-City-Tender-Bidding-Disciplined-Transparent-IGP-Hemant Nimbalkar-clarifies ...

ಯಾರು ಬೇಕಾದರೂ ಬಿಡ್ ಮಾಡಬಹುದಾಗಿದೆ. ನಾನು ಬರೆದ ಲೆಟರ್ ಪರಿಗಣಿಸಿದ ಸಮಿತಿ ರಚನೆಯಾಗಿರುವ ಹಿನ್ನೆಲೆ ನಾನು ಮಾತಾಡಲ್ಲ ಎಂದು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.

key words :  619 crore-Nirbhaya-Safe-City-Tender-Bidding-Disciplined-Transparent-IGP-Hemant Nimbalkar-clarifies …