Thursday, August 20, 2026

BDA Apartments

Home Front Page ಮೈತ್ರಿ ಸರಕಾರಕ್ಕೆ ಬೆಂಬಲ ಸೂಚಿಸಲು ಇಬ್ಬರು ರೆಬೆಲ್ ಶಾಸಕರು ಸಿದ್ಧ?!

ಮೈತ್ರಿ ಸರಕಾರಕ್ಕೆ ಬೆಂಬಲ ಸೂಚಿಸಲು ಇಬ್ಬರು ರೆಬೆಲ್ ಶಾಸಕರು ಸಿದ್ಧ?!

ಬೆಂಗಳೂರು, ಜುಲೈ 13, 2019, (www.justkannada.in): ಮೈತ್ರಿ ಸರ್ಕಾರದ 16 ಶಾಸಕರು ರಾಜೀನಾಮೆ ಬೆನ್ನಲ್ಲೇ ಸರ್ಕಾರ ರಚನೆಯ ಕನಸು ಕಂಡಿದ್ದ ಬಿಜೆಪಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಮೈತ್ರಿ ಸರ್ಕಾರದ ಇಬ್ಬರು ಶಾಸಕರು ಮತ್ತೆ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಲು ಸಿದ್ದರಿದ್ದಾರೆ ಎನ್ನಲಾಗಿದೆ.

ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ. ನನ್ನ ದಾರಿ ನನಗೆ ಆದರೆ, ವಿಶ್ವಾಸ ಮತ ಸಾಬೀತು ಹಾಗೂ ಫೈನಾನ್ಸ್ ಬಿಲ್ ಸಂದರ್ಭದಲ್ಲಿ ಸದನಕ್ಕೆ ಬಂದು ಬೆಂಬಲ ಕೊಡುತ್ತೇನೆ ರಾಮಲಿಂಗ ರೆಡ್ಡಿ ಹೇಳಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್’ನಿಂದ ಉಚ್ಚಾಟನೆಗೊಂಡು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರೋಷನ್ ಬೇಗ್ ಕೂಡ ಅಧಿವೇಶನದಲ್ಲಿ ಮೈತ್ರಿ ಸರ್ಕಾರದ ವಿಶ್ವಾಸದ ಸಾಬೀತಿಗೆ ಮುಂದಾದ್ರೆ ನಾನು ಸದನಕ್ಕೆ ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.