Thursday, October 8, 2026

BDA Apartments

Home Front Page ರಾಜ್ಯ ಸರ್ಕಾರವನ್ನ ಕೆಡವಲು ಕೇಂದ್ರದಿಂದ ಪ್ರಯತ್ನ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ರಾಜ್ಯ ಸರ್ಕಾರವನ್ನ ಕೆಡವಲು ಕೇಂದ್ರದಿಂದ ಪ್ರಯತ್ನ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಅಕ್ಟೋಬರ್,8,2026 (www.justkannada.in):  ಸಚಿವರಿಗೆ ಸ್ಟಿಂಗ್ ಆಪರೇಷನ್ ಬಗ್ಗೆ  ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ,  ರಾಜ್ಯದಲ್ಲಿ ನಾವು ನುಡಿದಂತೆ ನಡೆದಿದ್ದೇವೆ ಗೊಂದಲವಿಲ್ಲ. ಸಿಎಂ ಸಕ್ರಿಯವಾಗಿ ಜನರ ಮಧ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ಬಂದ ಮಾಹಿತಿ ಪ್ರಕಾರ ರಾಜ್ಯ ಸರ್ಕಾರವನ್ನು ಕೆಡವಲು ಯತ್ನಿಸಲಾಗುತ್ತಿದೆ.  ರಾಜ್ಯ ಸರ್ಕಾರವನ್ನ ಕೆಡವಲು ಕೇಂದ್ರದಿಂದ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.Attempt priyank kharge

ಕೆಪಿಎಸ್ ಸಿಯಲ್ಲಿ ಎಲ್ಲಾ ಪಕ್ಷದವರ ಹಸ್ತಕ್ಷೇಪವಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು,   ಶಿವಶಂಕರಪ್ಪ ಸಾಹುಕಾರ್ ಪ್ರಮುಖ ಆರೋಪಿ ಎಂದು ಹೇಳುತ್ತಿದ್ದೇವೆ.  ಬಿಜೆಪಿ ಜೆಡಿಎಸ್ ನವರು ಶಿವಶಂಕರಪ್ಪ ಬಗ್ಗೆ ಮಾತನಾಡುತ್ತಾರಾ?  ಎಷ್ಟು ಸಾರಿ ಡಿಕೆಶಿ,  ಪ್ರಿಯಾಕ್ ಖರ್ಗೆ ಅಂತಾರೆ. ಒಮ್ಮೆಯಾದರೂ ಶಿವಶಂಕರಪ್ಪ ಸಾಹುಕಾರ್ ಹೆಸರು ಹೇಳಿದ್ದಾರಾ?  ಸಾಹುಕಾರ್ ಬಗ್ಗೆ ಯಾವತ್ತೂ ಮಾತಾಡಿಲ್ಲ ಯಾಕೆ ಸಾಹುಕಾರ್ ರನ್ನು ಕೆಪಿಎಸ್ ಸಿ ಅಧ್ಯಕ್ಷ ಮಾಡಿದ್ದು ಯಾರು?  ಬಿಜೆಪಿ-ಜೆಡಿಎಸ್ ದುಡ್ಡು ಕೊಟ್ಟು  ಶಿವಶಂಕರಪ್ಪ ಸಾಹುಕಾರ್ ನೇಮಿಸಿರುವುದು. ಕೆಪಿಎಸ್ ಸಿ ಸದಸ್ಯರನ್ನು ನೇಮಕಾತಿ ಮಾಡಿದ್ದವರು ಯಾರು? ಇಂದು ಜೈಲಿನಲ್ಲಿರುವವರನ್ನು ಅಪಾಯಿಂಟ್ ಮಾಡಿದ್ದು ಯಾರು?  ಎಂದು ಪ್ರಶ್ನಿಸಿದರು.Attempt jk02_new jk02 new

 

English Summary
Title

Priyank Kharge Accuses Centre of Attempting to Topple Karnataka Government

Short Description
Karnataka Minister Priyank Kharge has accused the Central Government of launching a coordinated effort to topple the Congress state government. Kharge alleged that the BJP-led Centre is deploying central investigative agencies, including the CBI, ED, and Income Tax department, alongside undercover sting operations to target state ministers and MLAs. This statement aligns with recent warnings from Deputy CM D.K. Shivakumar, who cautioned cabinet members to remain vigilant against opposition-backed conspiracies. Kharge claimed the Centre's desperation stems from the BJP's ineffective local leadership.
Keywords
Attempt, Centre, topple, state government, Home Minister, Priyank Kharge