Tuesday, September 22, 2026

BDA Apartments

ನಿಮಗೆ ಜೀವದ ಬೆಲೆ ಗೊತ್ತಿದ್ಯಾ…?- ಸಚಿವ ಸಿ.ಟಿ ರವಿಗೆ ಯುವತಿಯಿಂದ ತರಾಟೆ… BDA JK_Ad...
Home Front Page ನಿಮಗೆ ಜೀವದ ಬೆಲೆ ಗೊತ್ತಿದ್ಯಾ…?- ಸಚಿವ ಸಿ.ಟಿ ರವಿಗೆ ಯುವತಿಯಿಂದ ತರಾಟೆ…

ನಿಮಗೆ ಜೀವದ ಬೆಲೆ ಗೊತ್ತಿದ್ಯಾ…?- ಸಚಿವ ಸಿ.ಟಿ ರವಿಗೆ ಯುವತಿಯಿಂದ ತರಾಟೆ…

ಚಿಕ್ಕಮಗಳೂರು,ನ,5,2019(www.justkannada.in):  ನಿನ್ನೆ ರಸ್ತೆಯಲ್ಲಿನ ಗುಂಡಿಯಿಂದಾಗಿ ಬೈಕ್ ನಿಂದ ಬಿದ್ದು ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬರು ಪ್ರವಾಸೋದ್ಯಮ ಸಚಿವ ಸಿ.ಟಿ ರವಿಗೆ ತರಾಟೆ ತೆಗೆದುಕೊಂಡಿದ್ದಾರೆ.

ನಿನ್ನೆ ಸಿಂದೂಜಾ (23)  ಎಂಬ ಯುವತಿ ವಿದೇಶಕ್ಕೆ ತೆರಳಲು ಪಾಸ್​ಪೋರ್ಟ್​ ವೇರಿಫಿಕೇಶನ್​ಗಾಗಿ ತನ್ನ ತಂದೆ ಜತೆ ಬೈಕ್​ನಲ್ಲಿ ಹೋಗುತ್ತಿದ್ದಳು. ಈ ವೇಳೆ ಚಿಕ್ಕಮಗಳೂರಿನ ದಂಡರಮಕ್ಕಿ ಬಳಿ  ಗುಂಡಿಬಿದ್ದಿದ್ದ ರಸ್ತೆಯಿಂದಾಗಿ ಬೈಕ್ ಸ್ಕಿಡ್ ಆಗಿ ಬಿದ್ದು ಯುವತಿ ಸಿಂಧೂಜಾ ಸಾವನ್ನಪ್ಪಿದ್ದರು.

ಈ ಪ್ರಕರಣ ಸಂಬಂಧ ಇದೀಗ ಯುವತಿಯೊಬ್ಬಳು ವಿಡಿಯೋ  ಮೂಲಕ ಸಚಿವ ಸಿ.ಟಿ ರವಿಗೆ ತರಾಟೆ ತೆಗೆದುಕೊಂಡಿದ್ದಾಳೆ. ನಿಮಗೆ ಜೀವದ ಬೆಲೆ ಗೊತ್ತಿದ್ಯಾ..? ನೀವು ನಿಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿದ್ದರೇ ಇಂತಹ ದುರಾದೃಷ್ಟಕರ ಘಟನೆ ನಡೆಯುತ್ತಿರಲಿಲ್ಲ ಎಂದು ಸಚಿವರ ಬೇಜವಾಬ್ದಾರಿತನವನ್ನ ಪ್ರಶ್ನಿಸಿದ್ದಾಳೆ.

Key words: chikkamagalur-young woman –class- Minister -CT Ravi