Friday, August 7, 2026

BDA Apartments

Home Front Page ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ..? ಅನುಭವ ಹಂಚಿಕೊಂಡ ಗಗನಯಾತ್ರಿ ಸುನಿತಾ ವಿಲಿಯಮ್ಸ್​

ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ..? ಅನುಭವ ಹಂಚಿಕೊಂಡ ಗಗನಯಾತ್ರಿ ಸುನಿತಾ ವಿಲಿಯಮ್ಸ್​

ವಾಷಿಂಗ್ಟನ್, ಏಪ್ರಿಲ್ 1,2025 (www.justkannada.in): ಭಾರತ ಮೂಲದ ಅಮೇರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತೆ ಎಂಬ ಬಗ್ಗೆ ಅಲ್ಲಿನ ಅನುಭವವನ್ನ ಹಂಚಿಕೊಂಡಿದ್ದಾರೆ.

ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ ಹಿಂದಿರುಗಿದ ನಂತರ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಈ ವೇಳೆ ಮಾತನಾಡಿರುವ ಸುನಿತಾ ವಿಲಿಯಮ್ಸ್ ಅವರು, ಬಾಹ್ಯಾಕಾಶದಿಂದ ಭಾರತ ಅದ್ಬುತವಾಗಿ ಕಾಣಿಸುತ್ತದೆ.  ಹಿಮಾಲಯದ ನೋಟ ಅದ್ಭುತವಾಗಿದೆ . ನಾವು ಹಿಮಾಲಯದ ಮೇಲೆ ಹಾದು ಹೋದಾಗಲೆಲ್ಲಾ ಬುಚ್ ವಿಲ್ಮರ್ ಅವುಗಳ ಅದ್ಭುತ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಹಿಮಾಲಯದ ಮೇಲೆ ಹೋದಾಗಲೆಲ್ಲಾ ಅದ್ಬುತ ಚಿತ್ರಗಳು ಸಿಕ್ಕವು. ಭಾರತದಲ್ಲಿ, ದೊಡ್ಡ ನಗರಗಳಿಂದ ಸಣ್ಣ ಪಟ್ಟಣಗಳವರೆಗೆ, ರಾತ್ರಿಯಲ್ಲಿ ಅದ್ಭುತವಾಗಿ ಕಾಣುವ ದೀಪಗಳನ್ನು ಕಾಣುವುದು ಮತ್ತಷ್ಟು ಸುಂದರವಾಗಿತ್ತು. ಪ್ರಮುಖವಾಗಿ ಗುಜರಾತ್ ಮತ್ತು ಮುಂಬೈ ದೀಪಗಳ ಜಾಲದಂತೆ ಕಾಣುತ್ತವೆ. ದೊಡ್ಡ ದೊಡ್ಡ ಸಿಟಿಗಳು ಪುಟ್ಟ ಪುಟ್ಟ ಹಳ್ಳಿಗಳಂತೆ ಅಲ್ಲಿ ನಮಗೆ ಗೋಚರಿಸುತ್ತವೆ ಎಂದು ತಿಳಿಸಿದರು.

ಭಾರತವು ಶ್ರೇಷ್ಠ ಪ್ರಜಾಪ್ರಭುತ್ವದ ದೇಶ ಅದು ಬಾಹ್ಯಕಾಶ ಜಗತ್ತಿನಲ್ಲಿ ತನ್ನ ನೆಲೆಯನ್ನ ಸ್ಥಾಪಿಸಿದೆ. 2026 ರ ವೇಳೆಗೆ ಗಗನಯಾತ್ರಿಗಳನ್ನು ಕಕ್ಷೆಗೆ ಕಳುಹಿಸಲು ಸಜ್ಜಾಗಿದೆ. ಇದರಲ್ಲಿ ಭಾಗವಾಗುವ ಮೂಲಕ ನಾವು ಭಾರತಕ್ಕೆ ಸಹಾಯ ಮಾಡಲು ಬಯಸುತ್ತೇವೆ. ಶೀಘ್ರ ಭಾರತಕ್ಕೆ ಭೇಟಿ ನೀಡುತ್ತೇನೆ, ಭಾರತೀಯರಿಗೆ ಸಹಾಯ ಮಾಡಲು ನಾನು ಹಿಂಜರಿಯುವುದಿಲ್ಲ ಎಂದು ಗಗನಯಾತ್ರಿ ಸುನಿತಾ ವಿಲಿಯಮ್ಸ್ ನುಡಿದಿದ್ದಾರೆ.

Key words: India, look, from, space, Astronaut, Sunita Williams