ಹಾಸನ,ನವೆಂಬರ್,7,2026 (www.justkannada.in): ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನ ಭೇಟಿಯಾಗಿದ್ದು ನಿಜ. ಅವರ ಜೊತೆ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ ಅವರ ಪುತ್ರ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಎಂಎಲ್ ಸಿ ರಾಜೇಂದ್ರ, ಹೆಚ್ ಡಿಕೆ ಭೇಟಿ ವಿಚಾರದಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ಹೆಚ್ ಡಿಕೆ ಜೊತೆ ರಾಜಕೀಯ ವಿಚಾರಗಳ ಚರ್ಚಿಸಿದ್ದೇನೆ. ನಮ್ಮ ಜಿಲ್ಲೆ ತಾಲ್ಲೂಕಿಗೆ ಕಾರ್ಖಾನೆ ತರುವ ಬಗ್ಗೆ ಚರ್ಚೆ ಮಾಡಿದ್ದೇನೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದೇನೆ. ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದಿದೆ ಎಂದರು.
ನಾನಾಗಲಿ ರಾಜಣ್ಣ ಅವರಾಗಲಿ ಜೆಡಿಎಸ್ ಸೇರುತ್ತೇವೆ ಎಂದು ಹೇಳಿಲ್ಲ. ಇನ್ನೂ ನನಗೆ 18 ತಿಂಗಳ ಅಧಿಕಾರ ಇದೆ. ಪಕ್ಷ ಬದಲಿಸುವ ವಿಚಾರ ಸದ್ಯಕ್ಕಿಲ್ಲ ಕಾಂಗ್ರೆಸ್ ನಲ್ಲೇ ಇದ್ದೇನೆ ಎಂದು ರಾಜೇಂದ್ರ ಅವರು ತಿಳಿಸಿದರು.






