ಏಕಾಏಕಿ ಪಠ್ಯ ಪುಸ್ತಕ ಪರಿಷ್ಕರಣೆ ಸರಿಯಲ್ಲ: ಮತಾಂತರ ನಿಷೇಧ ಕಾಯ್ದೆ ವಾಪಸ್ ಗೆ ನಾವು ಬಿಡುವುದಿಲ್ಲ- ಮಾಜಿ ಸಚಿವ ಆರ್.ಅಶೋಕ್.

ಬೆಂಗಳೂರು,ಜೂನ್,16,2023(www.justkannada.in):  ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮತ್ತೆ ಪಠ್ಯ ಪರಿಷ್ಕರಣೆ ಮತ್ತು ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯಲು ತೀರ್ಮಾನಿಸಿದ ಸರ್ಕಾರದ ನಡೆಯನ್ನ ಮಾಜಿ ಸಚಿವ ಆರ್.ಅಶೋಕ್ ಖಂಡಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಶಾಸಕ ಆರ್.ಅಶೋಕ್, ಕಾಂಗ್ರೆಸ್ ನವರು ರಾಜ್ಯವನ್ನು  ಮಿನಿ ಪಾಕ್ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ನಾಯಕರು ಪಿಎಫ್ ಐ ಪರ ಇದ್ದಾರೆ. ನಾವು ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯಲು ಬಿಡಲ್ಲ ಎಂದರು.

ಪಠ್ಯ ಪರಿಷ್ಕರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಶೋಕ್, ಏಕಾಏಕಿ ಪಠ್ಯ ಪುಸ್ತಕ ಪರಿಷ್ಕರಣೆ ಸರಿಯಲ್ಲ.  ಮಕ್ಕಳಿಗೆ ತೊಂದರೆ ಕೆಲಸ ಮಾಡಬಾರದು. ಮಕ್ಕಳಿಗೆ ಕೆಟ್ಟ ಸಂದೇಶ ಕೊಡೋದು ಸರಿಯಲ್ಲ ಎಂದು ಅಶೋಕ್ ಕಿಡಿಕಾರಿದರು.

ವಿದ್ಯುತ್ ದರ ಏರಿಕೆ ಕುರಿತು ವಾಗ್ದಾಳಿ ನಡೆಸಿದ ಅಶೋಕ್, 10 ರೂ. ನೀಡಿ 20 ರೂ ಕಿತ್ತುಕೊಳ್ತಿದ್ದಾರೆ. ಫ್ರಿ ಎಂದು ಹೇಳಿ ಈಗ ಕಂಡೀಷನ್ ಹಾಕುತ್ತಿದ್ದಾರೆ ವಿದ್ಯುತ್ ದರ ಬಿಜೆಪಿಯೇ ಮಾಡಿದ್ದು ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್ ಕಳ್ಳಾಟ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಕಾಂಗ್ರಸ್ ಅತ್ತೆಮನೆ ಅಲ್ಲ

ಸಿಂ ಸಿದ್ದರಾಮಯ್ಯಗೆ ನಾಚಿಕೆ ಆಗಲ್ವಾ..? ಅಂದು ಕೇಂದ್ರ  ಸರ್ಕಾರ ಕೊಟ್ಟ ಅಕ್ಕಿಗೆ ನಿಮ್ಮ ಸೀಲ್ ಹಾಕಿಕೊಂಡ್ರಿ 1ವರ್ಷದಲ್ಲಿ ಕರ್ನಾಟಕ ದಿವಾಳಿಯಾಗಿ ಹೋಗುತ್ತೆ. ಕೇಂದ್ರ ಸರ್ಕಾರ ಕಾಂಗ್ರಸ್ ಅತ್ತೆಮನೆ ಅಲ್ಲ.  ನಾಳೇ ಕರ್ನಾಟಕ ಮಾರುತ್ತೇವೆ ಅಂದ್ರೆ ಇದಕ್ಕೆ ಕೇಂದ್ರ ಸರ್ಕಾರ ಯೆಸ್ ಅನ್ನಬೇಕಾ..? ಎಂದು ಆರ್.ಅಶೋಕ್ ಗುಡುಗಿದರು.

Key words: Sudden- text book -revision – not right-Former Minister -R. Ashok.