Monday, October 5, 2026

BDA Apartments

ಅಂಧ ಗಾಯಕಿಯರಿಗೆ ಮನೆ ನಿರ್ಮಿಸಿಕೊಟ್ಟ ನಟ ಜಗ್ಗೇಶ್ BDA JK_Adv BDA Adv
Home Crime ಸಂತ್ರಸ್ತ ಮಹಿಳೆ ಕಿಡ್ನಾಪ್ ಕೇಸ್: 2ನೇ ಆರೋಪಿ ಸತೀಶ್ ಬಾಬುಗೆ 14 ದಿನಗಳ ಕಾಲ ನ್ಯಾಯಾಂಗ...

ಸಂತ್ರಸ್ತ ಮಹಿಳೆ ಕಿಡ್ನಾಪ್ ಕೇಸ್: 2ನೇ ಆರೋಪಿ ಸತೀಶ್ ಬಾಬುಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ.

ಮೈಸೂರು,ಮೇ,3,2024 (www.justkannada.in): ಹಾಸನ ಸಂಸದ  ಪ್ರಜ್ವಲ್‌ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯ ಅಪಹರಣ ಕೇಸ್ ನಲ್ಲಿ 2ನೇ ಆರೋಪಿಯಾಗಿರುವ ಸತೀಶ್ ಬಾಬುಗೆ ಕೆ.ಆರ್.ನಗರ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ನನ್ನ ತಾಯಿಯನ್ನ ಅಪಹರಿಸಲಾಗಿದೆ ಎಂದು ಆರೋಪಿಸಿ ಶಾಸಕ ಹೆಚ್ ಡಿ ರೇವಣ್ಣ ಮತ್ತು ಸುರೇಶ್ ಬಾಬು ಎಂಬುವವರ ವಿರುದ್ದ ಸಂತ್ರಸ್ತ ಮಹಿಳೆಯ ಪುತ್ರ ಕೆಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಎಫ್ ಐಆರ್ ದಾಖಲಾಗಿತ್ತು.ಸಂತ್ರಸ್ತ ಮಹಿಳೆ ಕಿಡ್ನಾಪ್ ಕೇಸ್: 2ನೇ ಆರೋಪಿ ಸತೀಶ್ ಬಾಬುಗೆ 14 ದಿನಗಳ ಕಾಲ ನ್ಯ...

ಎರಡನೇ ಆರೋಪಿ ಸತೀಶ್‌ ಬಾಬು ಅವರನ್ನು ನಿನ್ನೆ ರಾತ್ರಿಯೇ ಕೆ.ಆರ್‌.ನಗರ ಪೊಲೀಸರು ಬಂಧಿಸಿದ್ದರು ಎನ್ನಲಾಗಿದೆ.  ಇಂದು ಕೆ.ಆರ್.ನಗರ ನ್ಯಾಯಾಲಯಕ್ಕೆ ಆರೋಪಿ ಸತೀಶ್‌ ಬಾಬು ಹಾಜರು ಪಡಿಲಾಗಿದ್ದು ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

Key words: kidnapping case, Satish Babu,  judicial custody