ಅಕ್ಕಿ ಕೊಡಲು ಆಗದಿದ್ದರೇ ಹಣ ಹಾಕಿ ಎಂಬ ಸಿ.ಟಿ ರವಿ ಹೇಳಿಕೆಗೆ ಸಚಿವ ಕೆ.ಜೆ ಜಾರ್ಜ್ ತಿರುಗೇಟು.

ಚಿಕ್ಕಮಗಳೂರು,ಜೂನ್,16,2023(www.justkannada.in): ಅಕ್ಕಿ ಕೊಡಲು ಆಗದಿದ್ದರೇ  ಬಡವರ ಖಾತೆಗೆ ಹಣ ಹಾಕಿ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರಿಗೆ ಇಂಧನ ಸಚಿವ ಕೆ.ಜೆ ಜಾರ್ಜ್ ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಕೆ.ಜೆ ಜಾರ್ಜ್, ಜನರಿಗೆ ಬೇಕಾಗಿರೋದು ಹಣವಲ್ಲ, ಅಕ್ಕಿ. ಸಿಟಿ ರವಿ ಅವರೇ ಅಕ್ಕಿ ಇರೋದು ಬಡವರಿಗೆ.  ಆದರೆ  ಅಕ್ಕಿ ಬದಲು ದುಡ್ಡು ಕೊಡಿ ಅಂದ್ರೆ ಹೇಗೆ..? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಪೂರೈಸಲು ನಿರಾಕರಿಸಿದ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆಜೆ ಜಾರ್ಜ್, ನಾವು ಉಚಿತವಾಗಿ ಅಕ್ಕಿ ಕೊಡಿ ಅಂತಿಲ್ಲ.  ದುಡ್ಡು ಕೊಡುತ್ತೇವೆ ಕೊಡಿ ಎಂದಿದ್ದೇವೆ. ಎಫ್ ಸಿಐನವರು ಅಕ್ಕಿ ಸ್ಟಾಕ್ ಇದೆ ಎಂದಿದ್ದರು.  ಪಾಪ ಸಿಟಿ ರವಿಗೆ ಇದೆಲ್ಲಾಗೊತ್ತಾ. ಸಿಟಿ ರವಿ ಪಾರ್ಟಿ ಮ್ಯಾನ್. ಅಕ್ಕಿ ಹೊಂದಿಸಲು ಸಿಎಂ ಸಿದ್ದರಾಮ್ಯ ಮುನಿಯಪ್ಪ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಬಿಜೆಪಿ ಕೆಲಸವೇ ವಿರೋಧ ಮಾಡುವುದು. ಕಾಂಗ್ರೆಸ್ ಅಭಿವೃದ್ದಿ ಹೆಜ್ಜೆ ವಿರೋಧ ಮಾಡುವುದೇ ಕೆಲಸ. ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಮೊದಲೇ ಇತ್ತು. ಬಲವಂತ ಆಶ್ವಾಸನೆ ಕೊಟ್ಟು ಮತಾಂತರ ಮಾಡುವುದು ತಪ್ಪು. ಜನರಿಗೆ ಅನುಕೂಲಕರವಾಗುವ ಕಾಯ್ದೆ ಜಾರಿ ಮಾಡುತ್ತೇವೆ ಎಂದು ಜಾರ್ಜ್ ತಿಳಿಸಿದರು.

Key words: Minister- KJ George – CT Ravi- statement – rice – money.