ಬಿಲ್ಕಿಸ್ ಬಾನೊ ಪ್ರಕರಣ: ಅಪರಾಧಿಗಳ ಮುಂಚಿತ ಬಿಡುಗಡೆ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಎಂಪಿ ಮಹುವಾ ಮೋಯ್ತ್ರ

 

ನವದೆಹಲಿ, ಆಗಸ್ಟ್ ,24, 2022 (www.justkannada.in): ಟಿಎಂಸಿ ಸಂಸತ್ ಸದಸ್ಯ ಮಹುವಾ ಮೊಯ್ತ್ರಾ ಅವರು ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಂತಹ ಎಲ್ಲಾ ಹನ್ನೊಂದು ಅಪರಾಧಿಗಳಿಗೆ ಕ್ಷಮಾ ಬಿಡುಗಡೆ ನೀಡಿರುವುದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಪ್ರಕಾರ ಬಿಲ್ಕಿಸ್ ಬಾನೊಗೆ ಆಕೆ ಮತ್ತು ಆಕೆಯ ಕುಟುಂಬದವರ ಬಗ್ಗೆ ಆತಂಕವಿದೆ. ಪ್ರಕರಣವನ್ನು ಸಿಬಿಐ ತಪಾಸಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರಕ್ಕೆ ಅಪರಾಧಿಗಳನ್ನು ಸಿಆರ್‌ಪಿಸಿ ಕಲಂ ೪೩೨ರಡಿ ಕ್ಷಮಾ ಬಿಡುಗಡೆ ಮಾಡುವ ಅಥವಾ ಮುಂಚಿತವಾಗಿಯೇ ಬಿಡುಗಡೆಗೊಳಿಸುವ ಅಧಿಕಾರವಿಲ್ಲ ಎಂದು ಆರೋಪಿಸಲಾಗಿದೆ.

ಎಲ್ಲಾ ೧೧ ಅಪರಾಧಿಗಳನ್ನೂ ಸಹ ಒಂದೇ ದಿನದಂದು ಬಿಡುಗಡೆಗೊಳಿಸಿರುವುದು, ಗುಜರಾತ್ ಸರ್ಕಾರ ಪ್ರತಿಯೊಬ್ಬರ ವೈಯಕ್ತಿಕ ಪ್ರಕರಣವನ್ನು ಪರಿಗಣಿಸದೆ ಸಾರಾಸಗಟಾಗಿ ಯಾಂತ್ರಿಕವಾಗಿ ಬಿಡುಗಡೆಗೊಳಿಸಿರುವುದನ್ನು ತೋರಿಸುತ್ತದೆ ಎಂದು ದೂಷಿಸಲಾಗಿದೆ.

ಈ ರೀತಿ ಬಿಡುಗಡೆಗೊಳಿಸುವುದು ಮಾರು ರಾಮ್ ಮತ್ತು ಯುಓಐ ಹಾಗೂ ಸಂಗೀತ್ ಮತ್ತು ಸ್ಟೇಟ್ ಆಫ್ ಹರ್ಯಾಣ ಪ್ರಕರಣಗಳಲ್ಲಿ ಉಚ್ಛ ನ್ಯಾಯಾಲಯ ನಮೂದಿಸಿರುವ ತತ್ವಗಳ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯು ಕ್ಷಮಾ ಬಿಡುಗಡೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸುವಂತೆ ನ್ಯಾಯಾಲಯವನ್ನು ಕೋರಿದೆ ಹಾಗೂ ಕ್ಷಮಾ ಬಿಡುಗಡೆಯನ್ನು ಮಂಜೂರು ಮಾಡುವ ರಾಜ್ಯದ ಅಧಿಕಾರದ ಹಾಲಿ ಮಾರ್ಗಸೂಚಿಗಳ ಸಮಾನ ಅನ್ವಯಿಸುವಿಕೆಯನ್ನು ಖಾತ್ರಿಪಡಿಸುವಂತೆ ಮನವಿ ಮಾಡಲಾಗಿದೆ.

ಸುದ್ದಿ ಮೂಲ: ಲಾ ಟ್ರೆಂಡ್

Key words: Bilkis Bano -Case – TMC MP -Mahua Moitra – Supreme Court – Gujarat Govt- Decision