ಮೈಸೂರು,ಅಕ್ಟೋಬರ್,23,2026(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ರ ಅಂಗವಾಗಿ ನಗರದ ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಗಳ ನಂತರ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಈ ಸ್ವಚ್ಛತಾ ಕಾರ್ಯಕ್ರಮದಡಿ ಈ ಕೆಳಗಿನ ಸ್ಥಳಗಳಲ್ಲಿ ವಿಶೇಷ ತಂಡಗಳಿಂದ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಮಾಡಲಾಯಿತು:
– ಮಹಾರಾಜಾ ಗ್ರೌಂಡ್ಸ್ – ಆಹಾರ ಮೇಳ
– ಓವಲ್ ಕ್ರೀಡಾಂಗಣ / ಹಾಕಿ ಗ್ರೌಂಡ್ – ಡಾಗ್ ಶೋ
– ಕಲಾಮಂದಿರ – ಸಾಂಸ್ಕೃತಿಕ ಕಾರ್ಯಕ್ರಮ
– ಜಗನ್ಮೋಹನ ಅರಮನೆ
– ಜೆ.ಕೆ. ಗ್ರೌಂಡ್ಸ್ – ಮಹಿಳಾ ಮತ್ತು ಮಕ್ಕಳ ದಸರಾ
– ಮೈಸೂರು ಅರಮನೆ ಆವರಣ
– ಕುಪ್ಪಣ್ಣ ಪಾರ್ಕ್
– ಪುರಭವನ (ಟೌನ್ ಹಾಲ್)
– ಕುಸ್ತಿ ಪಂದ್ಯಾವಳಿ ಕ್ರೀಡಾಂಗಣ
– ಚಾಮುಂಡಿ ವಿಹಾರ ಕ್ರೀಡಾಂಗಣ
– ಬನ್ನಿಮಂಟಪ – ಪಂಜಿನ ಕವಾಯತು
– ದಸರಾ ಆಹಾರ ಮೇಳ
ಈ ಎಲ್ಲಾ ಸ್ಥಳಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸಂಗ್ರಹಿಸಲಾಗಿದ್ದು, ನಿಗದಿತ ವಾಹನಗಳ ಮೂಲಕ ಸಂಸ್ಕರಣಾ ಘಟಕಗಳಿಗೆ ರವಾನಿಸಲಾಗಿದೆ.
ತ್ಯಾಜ್ಯ ಸಂಗ್ರಹಣೆಯ ವಿವರ (11.10.2026 ರಿಂದ 21.10.2026ರವರೆಗೆ):
– ಒಟ್ಟು ಸಂಗ್ರಹವಾದ ತ್ಯಾಜ್ಯ: 267.55 ಮೆಟ್ರಿಕ್ ಟನ್
– ಹಸಿ ತ್ಯಾಜ್ಯ: 148.46 ಮೆಟ್ರಿಕ್ ಟನ್
– ಒಣ ತ್ಯಾಜ್ಯ: 119.09 ಮೆಟ್ರಿಕ್ ಟನ್
*ದಿನಾಂಕ 21.10.2026ರ ತ್ಯಾಜ್ಯ ಸಂಗ್ರಹಣೆಯ ವಿವರ:
– ಒಟ್ಟು ಹಸಿ ತ್ಯಾಜ್ಯ: 26 ಮೆಟ್ರಿಕ್ ಟನ್
– ಒಟ್ಟು ಒಣ ತ್ಯಾಜ್ಯ: 37.5 ಮೆಟ್ರಿಕ್ ಟನ್
– ಒಟ್ಟು ತ್ಯಾಜ್ಯ: 63.5 ಮೆಟ್ರಿಕ್ ಟನ್
ಈ ಸ್ವಚ್ಚತಾ ಕಾರ್ಯದಲ್ಲಿ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು, ಪೌರಕಾರ್ಮಿಕರು, ಸ್ವಚ್ಛತಾ ಮೇಲ್ವಿಚಾರಕರು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಭಾಗವಹಿಸಿದ್ದರು. ಸ್ವಚ್ಛತಾ ಕಾರ್ಯಕ್ಕೆ ಸಹಕರಿಸಿದ ಸಾರ್ವಜನಿಕರಿಗೆ ಮೈಸೂರು ಮಹಾನಗರ ಪಾಲಿಕೆಯು ಧನ್ಯವಾದ ತಿಳಿಸಿದ್ದು, “ಸ್ವಚ್ಛ ಮೈಸೂರು, ಸುಂದರ ಮೈಸೂರು” ಎಂಬ ಧ್ಯೇಯದೊಂದಿಗೆ ನಮ್ಮ ನಗರವನ್ನು ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಮೈಸೂರು ಮಹಾನಗರ ಪಾಲಿಕೆ ಮನವಿ ಮಾಡಿದೆ.






