Saturday, October 24, 2026

Dasara Wishes

Happy Dasara
Home Front Page ಜಟ್ಟಿ ಕಾಳಗ ರದ್ದು ಆತಂಕದ ವಿಚಾರವಲ್ಲ: ವರದಿ ಪಡೆದು ಸ್ಪಷ್ಟನೆ ನೀಡ್ತೇನೆ-ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್

ಜಟ್ಟಿ ಕಾಳಗ ರದ್ದು ಆತಂಕದ ವಿಚಾರವಲ್ಲ: ವರದಿ ಪಡೆದು ಸ್ಪಷ್ಟನೆ ನೀಡ್ತೇನೆ-ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್

ಜಟ್ಟಿ ಕಾಳಗ ರದ್ದು ಆತಂಕದ ವಿಚಾರವಲ್ಲ: ವರದಿ ಪಡೆದು ಸ್ಪಷ್ಟನೆ ನೀಡ್ತೇನೆ-ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್

ಮೈಸೂರು,ಅಕ್ಟೋಬರ್,24,2026 (www.justkannada.in):  ಮೈಸೂರು ದಸರಾ ಅರಮನೆಯಲ್ಲಿ ವಿಜಯದಶಮಿಯಂದು ನಡೆಯುವ ಜಟ್ಟಿಕಾಳಗ ರದ್ದಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಈ ಕುರಿತು  ವರದಿ ಪಡೆದು  ನಾಳೆ ಸ್ಪಷ್ಟನೆ ನೀಡುತ್ತೇನೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮೋದಾದೇವಿ ಒಡೆಯರ್, ರಾಜ್ಯದ ಜನರನ್ನ ತಾಯಿ ಕಾಪಾಡುತ್ತಿದ್ದಾಳೆ. ಮುಂದೆ ಕೂಡ ಆಕೆ ಎಲ್ಲರನ್ನೂ ಕಾಪಾಡುತ್ತಾಳೆ. ಶುಭಸೂಚಕವಾಗಿ ಮಳೆ ಬರುತ್ತಿದೆ. ಇದು ರಾಜ್ಯಕ್ಕೆ ಒಳ್ಳೆಯ ಸಂಕೇತ. ನಾಡಿನ ಅನ್ನದಾತರಿಗೆ ಸದಾ ಒಳಿತಾಗಲಿ. ಸುಖ- ಶಾಂತಿ – ನೆಮ್ಮದಿಯಿಂದ ಜನರು ಬಾಳಲಿ ಎಂದು ಹಾರೈಸಿದರು.ಮೈಸೂರು ದಸರಾ: ಇತಿಹಾಸದಲ್ಲೇ ಇದೇ ಮೊದಲ ಬಾರಿ ‘ವಜ್ರಮುಷ್ಟಿ ಕಾಳಗ’ ರದ್ದು

ಜಟ್ಟಿಕಾಳಗ ವಿಚಾರದಲ್ಲಿ ಅಸ್ಪಷ್ಟ ಮಾಹಿತಿ ಇದೆ. ಈ ಕುರಿತು ವರದಿ ಪಡೆದು ಸ್ಪಷ್ಟನೆ ನೀಡುತ್ತೇವೆ. ನಾವು ಯಾವುದೇ ಜ್ಯೋತಿಷ್ಯ ನೋಡಲ್ಲ. ದೇವರನ್ನ ನಂಬಿದ ಮೇಲೆ ಜ್ಯೋತಿಷ್ಯ ಯಾಕೆ ನಂಬಬೇಕು? ಜಟ್ಟಿಕಾಳಗ ನಿಂತಿರುವುದು ಆತಂಕದ ವಿಚಾರವಲ್ಲ. ದೇವರನ್ನ ನಂಬಿದ ಮೇಲೆ ಯಾವ ತೊಂದರೆ ಇಲ್ಲ ಒಂದೊಂದು ಸರಿ ಈ ರೀತಿ  ಆಗುವುದು ಸಹಜ. ಈ ವಿಚಾರಕ್ಕೆ ಬೇರೆ ರೂಪ ಕೊಡಬೇಡಿ. ನಮ್ಮ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಮುಗಿದಿದೆ. ಇದಕ್ಕೆಲ್ಲಾ ವರದಿ ತರಿಸಿಕೊಂಡು ಶೀಘ್ರ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.Mysore dasara jk02_new jk02 new

 

English Summary
Title

Cancellation of the wrestling match is not a cause for concern; I will provide a clarification after obtaining a report – Royal family member Pramoda Devi Wodeyar

Short Description
Responding to the cancellation of the 'Jatti Kaalaga' (wrestlers' duel) traditionally held at the Mysore Palace on the day of Vijayadashami, member of the royal family Pramoda Devi Wadiyar stated that she would obtain a report on the matter and provide a clarification tomorrow. Speaking to the media today, Pramoda Devi Wadiyar remarked that the Divine Mother is protecting the people of the state and will continue to do so in the future. She noted that the ongoing rainfall is an auspicious sign—a positive omen for the state. She expressed her wishes for the well-being of the state's farmers and hoped that the people might live with happiness, peace, and contentment.
Keywords
Mysore dasara, Vajramusti kalaga, clarification, after, report, Pramoda Devi Wodeyar