Saturday, October 24, 2026

Dasara Wishes

Happy Dasara
Home Front Page ಶಿಷ್ಠಾಚಾರದ ಬಗ್ಗೆ ಗೊತ್ತಿಲ್ಲ: ರಾಜಪ್ರತಿನಿಧಿಯಾಗಿ ನಾನು ಭಾಗಿಯಾಗಿದ್ದೀನಿ- ಸಂಸದ ಯದುವೀರ್

ಶಿಷ್ಠಾಚಾರದ ಬಗ್ಗೆ ಗೊತ್ತಿಲ್ಲ: ರಾಜಪ್ರತಿನಿಧಿಯಾಗಿ ನಾನು ಭಾಗಿಯಾಗಿದ್ದೀನಿ- ಸಂಸದ ಯದುವೀರ್

ಶಿಷ್ಠಾಚಾರದ ಬಗ್ಗೆ ಗೊತ್ತಿಲ್ಲ: ರಾಜಪ್ರತಿನಿಧಿಯಾಗಿ ನಾನು ಭಾಗಿಯಾಗಿದ್ದೀನಿ- ಸಂಸದ ಯದುವೀರ್

ಮೈಸೂರು,ಅಕ್ಟೋಬರ್,24,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ವೇಳೆ ಶಿಷ್ಟಾಚಾರ ಉಲ್ಲಂಘನೆ, ನಂದಿಧ್ವಜ ಪೂಜೆ ವೇಳೆ ಸಚಿವರಿಗೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಸಂಸದ ,ರಾಜವಂಶಸ್ಥ ಯದುವೀರ್ ಒಡೆಯರ್, ಈ ಬಾರಿ ದಸರಾದಲ್ಲಿ ಕೆಲವು ಕಾರ್ಯಕ್ರಮಗಳು ಸುಧಾರಣೆ ಆಗಿವೆ. ಮತ್ತಷ್ಟು ಕಾರ್ಯಕ್ರಮಗಳು ಸುಧಾರಣೆ ಕಾಣಬೇಕಿದೆ. ಮುಂದಿನ ದಸರಾದಲ್ಲಿ ಅದರ ಕುರಿತು ಗಮನಹರಿಸಬೇಕಿದೆ. ಸಾಕಷ್ಟು ‌ವಿಷಯ ಕಲಿತು, ಸಲಹೆ ನೀಡುತ್ತೇವೆ. ಈ ಸಂದರ್ಭಕ್ಕೆ ಯಾರ ಮೇಲೂ ಆರೋಪ ಮಾಡುವುದು ಸರಿಯಲ್ಲ. ನಾನು ಸರಿಯಾದ ವೇದಿಕೆಯಲ್ಲಿ ಅದರ ಬಗ್ಗೆ ಮಾತನಾಡುತ್ತೇನೆ ಎಂದರು.ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಡಿಕೆ ಶಿವಕುಮಾರ್ ಚಾಲನೆ

ಶಿಷ್ಠಾಚಾರ ಅಂದರೆ‌ ಏನು ಎಂಬುದು ಯಾರಿಗೂ ಸ್ಪಷ್ಟತೆ ಇಲ್ಲ. ಮೊದಲು ಶಿಷ್ಠಾಚಾರದ ಬಗ್ಗೆ ಸ್ಪಷ್ಟನೆಬೇಕು. ಆ ಮೂಲಕ ಮುಂಬರುವ ದಿನಗಳಲ್ಲಿ ಅದನ್ನ ಪಾಲಿಸಬೇಕು. ಶಿಷ್ಠಾಚಾರದ ಬಗ್ಗೆ ನನಗೆ ಗೊತ್ತಿಲ್ಲ. ಕಳೆದ 12 ವರ್ಷದಿಂದ ರಾಜಮನೆತನದ ಪ್ರತಿನಿಧಿಯಾಗಿ ತಾಯಿ ಅವರು ಕಳುಹಿಸುತ್ತಾರೆ. ನಾನು ರಾಜಪ್ರತಿನಿಧಿಯಾಗಿ ಭಾಗಿಯಾಗುತ್ತೀನಿ. ಅದನ್ನ ಹೊರತುಪಡಿಸಿ ಶಿಷ್ಠಾಚಾರದ ಬಗ್ಗೆ ಗೊತ್ತಿಲ್ಲ. ಸಾಮಾನ್ಯವಾಗಿ ಸಿಎಂ, ಡಿಸಿಎಂ, ಇಬ್ಬರು ಅಧಿಕಾರಿಗಳು ಇರುತ್ತಿದ್ದರು. ಶಿಷ್ಠಾಚಾರದ ಬಗ್ಗೆ ಅಧಿಕೃತವಾಗಿ ಗೊತ್ತಿಲ್ಲ ಎಂದರು.

ನಂದಿಧ್ವಜ ಪೂಜೆ ವೇಳೆ ಸಚಿವರನ್ನ ತಡೆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಸರ್ಕಾರ ಅವರದ್ದೇ ಪಕ್ಷವಿದೆ. ಸರ್ಕಾರ ಅದನ್ನ ತೀರ್ಮಾನ ಮಾಡಬೇಕು. ನನಗೆ ಕಡಿಮೆ ಜನರಿದ್ದರೆ ಸೂಕ್ತ ಅನಿಸುತ್ತದೆ. ಪೂಜೆ ವೇಳೆ ವಿಧಿಗಳ ಆಚರಣೆಗೆ ಗೌರವ ಕೊಡಬೇಕು. ಒಳ್ಳೆಯ ರೀತಿಯ ವಿಧಿ ನಡೆಯಬೇಕಾದರೆ ಕಡಿಮೆ ಜನರಿರಬೇಕು. ಸಿಎಂ ರಾಜ್ಯದ ಪ್ರತಿನಿಧಿ ಆಗಿದ್ದಾರೆ. ಅವರೊಬ್ಬರೇ ಇದ್ದರೆ ಸಾಕು ಅಂತ ನನಗೆ ಅನಿಸುತ್ತದೆ. ನಾವೂ ಕೂಡ ಬರುವ ಅಗತ್ಯವಿಲ್ಲ. ಸರ್ಕಾರದ ಕಾರ್ಯಕ್ರಮವಾದ ಕಾರಣ ಸಿಎಂ ಇದ್ದರೆ ಸಾಕು  ಎಂದರು.ಶಿಷ್ಠಾಚಾರದ ಬಗ್ಗೆ ಗೊತ್ತಿಲ್ಲ: ರಾಜಪ್ರತಿನಿಧಿಯಾಗಿ ನಾನು ಭಾಗಿಯಾಗಿದ್ದೀನಿ- ಸಂಸದ ಯದುವೀರ್

ಮೈಸೂರು ದಸರಾ ಜಂಬೂಸವಾರಿಗೆ ಅತಿಥಿಗಳಾಗಿ ಅಕ್ಕ- ಪಕ್ಕದ ರಾಜ್ಯದ ಸಿಎಂಗಳು ಆಗಮಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಯದುವೀರ್, ಅವರೆಲ್ಲರೂ ಅತಿಥಿಗಳಾಗಿರುವ ಕಾರಣ ಬಂದಿದ್ದಾರೆ. ಅವರು ಬಂದಿದ್ದರಿಂದ ದಸರಾಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ. ಅತಿಥಿಗಳನ್ನ ಕರೆದು, ಪುಷ್ಪಾರ್ಚನೆ ಮಾಡಿಸದಿದ್ದರೆ ಹೇಗೆ ಆಗುತ್ತದೆ?. ಈ ಕಾರಣಕ್ಕೆ ಅಧಿಕೃತ ಶಿಷ್ಠಾಷಾರ ರೂಪಿಸಬೇಕು. ಅದಕ್ಕೊಂದು ರೂಪುರೇಷೆ ನಿರ್ಮಿಸಿದರೆ ಮಾತನಾಡಬಹುದು ಎಂದು ತಿಳಿಸಿದರು.Unaware jk02_new jk02 new

 

English Summary
Title

Mysuru Dasara Protocol: MP Yaduveer Demands Clear Guidelines Amid Row

Short Description
Mysuru-Kodagu MP Yaduveer Krishnadatta Chamaraja Wadiyar has urged the Karnataka government to establish clear guidelines for the Mysuru Dasara festival, stating he is unaware of any existing official protocol. His statement follows growing controversies surrounding the grand celebrations. A political row erupted after senior Dalit ministers faced entry restrictions during the sacred Nandi Dhwaja Puja. Additionally, distinct protocol breaches occurred during the Jamboo Savari procession, where the names of several key dignitaries were missing from the floral benediction list. Yaduveer emphasized that standard operating procedures are vital to prevent future confusion, security lapses, and political disputes.
Keywords
Mysore dasara, Unaware, protocol, MP, Yaduveer