Wednesday, September 23, 2026

BDA Apartments

Welcome to Just Kannada Online News Portal BDA JK_Adv BDA Adv
Home Front Page ದಕ್ಷಿಣ ಭಾರತ ಉತ್ಸವ: ರಾಜ್ಯಕ್ಕೆ ಹರಿದು ಬಂತು 3750 ಕೋಟಿ ರೂ. ಬಂಡವಾಳ

ದಕ್ಷಿಣ ಭಾರತ ಉತ್ಸವ: ರಾಜ್ಯಕ್ಕೆ ಹರಿದು ಬಂತು 3750 ಕೋಟಿ ರೂ. ಬಂಡವಾಳ

ಬೆಂಗಳೂರು,ಜೂನ್ 15,2024 (www.justkannada.in):  ದಕ್ಷಿಣ ಭಾರತ ಉತ್ಸವದ ಸಂದರ್ಭದಲ್ಲಿ ಕರ್ನಾಟಕಕ್ಕೆ ರೂ.3750 ಕೋಟಿ ಬಂಡವಾಳ ಹರಿದು ಬಂದಿದೆ ಎಂದು ಪ್ರವಾಸೋದ್ಯಮ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ದಕ್ಷಿಣ ಭಾರತ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಎಚ್.ಕೆ ಪಾಟೀಲ್,  ಕರ್ನಾಟಕದ 320 ಕಿಲೋಮೀಟರ್ ಉದ್ದದ ಕರಾವಳಿ ಕಡಲ ತೀರದಲ್ಲಿರುವ 40 ತಾಣಗಳನ್ನು ಗುರುತಿಸಲಾಗಿದೆ. ಈ ತಾಣಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಆಸಕ್ತಿ ವ್ಯಕ್ತಪಡಿಸುವುದಕ್ಕೆ ಕರೆಯಲಾಗಿದೆ. ಆಸಕ್ತಿ ವ್ಯಕ್ತಪಡಿಸಬೇಕೆಂದು ಸಚಿವ ಎಚ್ ಕೆ ಪಾಟೀಲ್ ಕೋರಿದರು.

ಕರ್ನಾಟಕ ಪುರಾತತ್ವ ಕ್ಷೇತ್ರದಲ್ಲಿ ವಿಶೇಷ ಸ್ಥಾನದಲ್ಲಿದೆ. 25,000ಕ್ಕೂ ಹೆಚ್ಚು ಮಹತ್ವದ ಸ್ಮಾರಕಗಳು ಕರ್ನಾಟಕದಲ್ಲಿವೆ. ಆದರೆ ಈ ಎಲ್ಲಾ ಸ್ಥಾನಗಳ ಪೈಕಿ ಕೇವಲ 500 ತಾಣಗಳನ್ನು ಮಾತ್ರ ನಾವು ಸಂರಕ್ಷಿಸುತ್ತಿದ್ದೇವೆ. ಉಳಿದ ತಾಣಗಳ ಸಂರಕ್ಷಣೆಗೆ ಕಾಲಬದ್ದ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು ದತ್ತು ಸ್ಮಾರಕ ದತ್ತು ಯೋಜನೆ ಅಂತಹ ವಿಶೇಷ ಕಾರ್ಯಕ್ರಮಕ್ಕೆ ದಾನಿಗಳು ಸಹಕರಿಸಬೇಕೆಂದು ಸಚಿವ ಎಚ್.ಕೆ ಪಾಟೀಲ್  ಕೋರಿದರು.ದಕ್ಷಿಣ ಭಾರತ ಉತ್ಸವ: ರಾಜ್ಯಕ್ಕೆ ಹರಿದು ಬಂತು 3750 ಕೋಟಿ ರೂ. ಬಂಡವಾಳ hk patil

ಕರ್ನಾಟಕ ಹಲವಾರು ಶ್ರದ್ಧಾ ಕೇಂದ್ರಗಳನ್ನು ಹೊಂದಿದ್ದು ಅತಿ ಪವಿತ್ರವಾದ ರಾಜ್ಯಗಳಲ್ಲಿ ಕರ್ನಾಟಕ ಹಿರಿಯ ಸ್ಥಾನದಲ್ಲಿದೆ.  ಮಂಗಳೂರು,ಉಡುಪಿ, ಕಾರವಾರದಿಂದ ಹಿಡಿದು ಸವದತ್ತಿ, ರೇಣುಕಾ ಯಲ್ಲಮ್ಮ, ಚಾಮುಂಡೇಶ್ವರಿ,  ಹುಲಿಗೆಮ್ಮ ಹೊಳಲಮ್ಮ, ಬಾದಾಮಿ ಬನಶಂಕರಿ ಗಾಣಗಾಪುರ ದತ್ತಮಂದಿರ ಬೀದರ್ ಬಸವನಾಡು, ಕೂಡಲಸಂಗಮ ಸೇರಿದಂತೆ ಇಂತಹ ಪವಿತ್ರ ಸ್ಥಳಗಳಲ್ಲಿ ಕರ್ನಾಟಕ ಮೂಲಭೂತ ಸೌಲಭ್ಯ ಸೃಷ್ಟಿಸುವ ಪಿಪಿಪಿ ಮಾಡೆಲ್ ನಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಣಯಿಸಿದೆ.

ಹಂಪಿ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಸೋಮನಾಥಪುರ ಪಶ್ಚಿಮ ಘಟ್ಟಗಳ ನೈಸರ್ಗಿಕ ತಾಣಗಳು ಈಗಾಗಲೇ ವಿಶ್ವ ಪಾರಂಪರಿಕ ತಾಣಗಳೆಂದು ಯುನೆಸ್ಕೊದಿಂದ ಮಾನ್ಯತೆ ಪಡೆದಿವೆ. ಬೀದರ್ ನ ಕರೇಜ್ ಲಕ್ಕುಂಡಿ ಡೆಕ್ಕನ್ ಸಲ್ತನೇತಗಳನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಮಾಡಲು ಸೂಕ್ತ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ  ಎಂದು ಸಚಿವ ಹೆಚ್.ಕೆ ಪಾಟೀಲ್  ಹೇಳಿದರು.

ಅರಣ್ಯ ಗುಡ್ಡಗಾಡು ಹೊಳ್ಳಕೊಳ್ಳ ನೈಸರ್ಗಿಕ ಸಂಪತ್ತಿಗೆ ಹೆಸರಾದದ್ದು ಕರ್ನಾಟಕ ವನ್ಯಜೀವಿಗಳು ನೈಸರ್ಗಿಕ ರಮಣೀಯ ಸ್ಥಳಗಳ ಪ್ರದರ್ಶನ ವಿಶೇಷ ರೀತಿಯಲ್ಲಿ ಆಗಬೇಕಾಗಿದೆ.  ಅದಕ್ಕಾಗಿ ವಿಶೇಷ ಪ್ರಯತ್ನ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಹೆಚ್.ಕೆ ಪಾಟೀಲ್  ತಿಳಿಸಿದರು.

ಸಾಹಸಿ ಪ್ರವಾಸೋದ್ಯಮ, ಶೈಕ್ಷಣಿಕ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ ದಿನ, ಸಂತೋಷದಿಂದ ಬೇಸರ ಕಳೆಯುವ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ ಪಾರಂಪರಿಕ ತಾಣಗಳ ಅಧ್ಯಯನ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.

Key words: South India Festival, Minister, HK Patil