Wednesday, September 23, 2026

BDA Apartments

Welcome to Just Kannada Online News Portal BDA JK_Adv BDA Adv
Home Crime ವಿದ್ಯುತ್‌ ಅವಘಡದಲ್ಲಿ ಲೈನ್‌ ಮೆನ್‌ ಸ್ಥಿತಿ ಗಂಭೀರ: ಆರೋಗ್ಯ ಸ್ಥಿರ ಎಂದ ವೈದ್ಯರು

ವಿದ್ಯುತ್‌ ಅವಘಡದಲ್ಲಿ ಲೈನ್‌ ಮೆನ್‌ ಸ್ಥಿತಿ ಗಂಭೀರ: ಆರೋಗ್ಯ ಸ್ಥಿರ ಎಂದ ವೈದ್ಯರು

ಮೈಸೂರು,ಸೆಪ್ಟಂಬರ್‌,23,2026 (www.justkannada.in): ಚಾಮುಂಡಿಪುರಂ ಉಪವಿಭಾಗದಲ್ಲಿ ವಿದ್ಯುತ್ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ವಿದ್ಯುತ್‌ ಅವಘಡ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಲೈನ್‌ ಮೆನ್ ಕಾರ್ತಿಕ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕಾವೇರಿ ಆಸ್ಪತ್ರೆ ವೈದ್ಯರ ಮಾಹಿತಿ ನೀಡಿದ್ದಾರೆ.

ನಗರದ ಚಾಮುಂಡಿಪುರಂನಲ್ಲಿ ಚಾಮುಂಡಿಪುರಂ ಉಪವಿಭಾಗದಲ್ಲಿ ವಿದ್ಯುತ್ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ಕೆ.ಆರ್.ನಗರ ಮೂಲದ ಲೈನ್‌ ಮೆನ್ ಕಾರ್ತಿಕ್ ಅವರು ವಿದ್ಯುತ್ ಸ್ಪರ್ಶದಿಂದ ತೀವ್ರವಾಗಿ ಗಾಯಗೊಂಡು ಅವರ ಸ್ಥಿತಿ ಗಂಭೀರವಾಗಿತ್ತು. ನಗರದ ಸಿದ್ಧಾರ್ಥನಗರದ ಕಾವೇರಿ ಆಸ್ಪತ್ರೆಯಲ್ಲಿ ಗಾಯಾಳು ಕಾರ್ತಿಕ್ ಚಿಕಿತ್ಸೆ ಪಡೆಯುತ್ತಿದ್ದಾರೆ.Electrical accident electric

ಕಾರ್ತಿಕ್‌ ಆರೋಗ್ಯ ಸ್ಥಿತಿ ಬಗ್ಗೆ ಕಾವೇರಿ ಆಸ್ಪತ್ರೆ ಆರ್ಥೋಪೆಡಿಕ್ ಸರ್ಜನ್ ಡಾ. ಮಂಜುನಾಥ್ ಭಾರ್ಗವ ಅವರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.  ವಿದ್ಯುತ್ ಶಾಕ್ ನಿಂದಾದ ದೇಹದ ಸುಟ್ಟಗಾಯಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, ಎರಡೂ ಕೈಗಳು, ಹೊಟ್ಟೆ ಮತ್ತು ಕಾಲುಗಳ ಭಾಗಕ್ಕೆ ತೀವ್ರ ಹಾನಿಯಾಗಿದೆ. ಹೀಗಾಗಿ ಸದ್ಯ ವೈದ್ಯರ ತಂಡ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದು, ಎಡಗೈ ಹಾಗೂ ಬಲಗೈನ ಮಣಿಕಟ್ಟು ತೆರವು ಮಾಡಿದ್ದಾರೆ.

ಹೊಟ್ಟೆಯ ಭಾಗದಲ್ಲಾಗಿರುವ ಗಾಯಗಳಿಗೂ ವೈದ್ಯರು ಚಿಕಿತ್ಸೆ ನೀಡಿದ್ದು, ಪ್ರಸ್ತುತ ಗಾಯಾಳು ಕಾರ್ತಿಕ್ ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ರೋಗಿಯ ಸ್ಥಿತಿ ಗಂಭೀರವಾಗಿದ್ದರೆ ಇತ್ತ ವೈದ್ಯರು ಆರೋಗ್ಯ ಸ್ಥಿರ ಎಂದು ತಿಳಿಸಿದ್ದು,  ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ನಿರಂತರ ನಿಗಾ ವಹಿಸಲಾಗಿದೆ.Electrical accident jk02

Key words: Electrical accident, Mysoŗe, condition, seriously injured, lineman, Doctors

English Summary
Title

Mysuru Electrical Accident: CESC Lineman Critically Injured, Battles for Life

Short Description
A 33-year-old CESC junior lineman, Karthik, is battling for life after a horrific electrical accident in Mysuru near Kurubarahalli Circle. The tragic incident occurred during repair work, leaving the worker with severe burn injuries, a severed left wrist, and life-threatening abdominal trauma. He is currently receiving emergency treatment in the ICU at a local private hospital. The shocking Mysuru power line mishap has sparked massive protests from residents and Chamundeshwari Electricity Supply Corporation (CESC) employees, who allege severe departmental negligence and a lack of proper safety equipment for field staff.
Keywords
Electrical accident, Mysoŗe, condition, seriously injured, lineman, Doctors