‘ರಾಜ್ಯ ಬಿಜೆಪಿ ಸರ್ಕಾರ ಎಷ್ಟು ಬೇಗ ತೊಲಗುತ್ತೋ ಅಷ್ಟು ಒಳ್ಳೆಯದು-  ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ…

0
210

ಬೆಂಗಳೂರು,ನವೆಂಬರ್,28,2020(www.justkannada.in): ‘ರಾಜ್ಯ ಬಿಜೆಪಿ ಸರ್ಕಾರ ಎಷ್ಟು ಬೇಗ ತೊಲಗುತ್ತೋ ಅಷ್ಟು ಒಳ್ಳೆಯದು ಎಂದು   ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದರು.I didn't knew CM BSY will think so cheaply - KPCC President D.K. Shivakumar

ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ‘ರಾಜ್ಯ ಬಿಜೆಪಿ ಸರ್ಕಾರ ಎಷ್ಟು ಬೇಗ ತೊಲಗುತ್ತೋ ಅಷ್ಟು ಒಳ್ಳೆಯದು. ಯಡಿಯೂರಪ್ಪ ನಾಯಕತ್ವ ಬದಲಾಗುತ್ತೋ ಇಲ್ಲವೋ ಗೊತ್ತಿಲ್ಲ. ಎಂಟಿಬಿ ನಾಗರಾಜ್, ಶಂಕರ್ ಅವರನ್ನೆಲ್ಲ ಮಂತ್ರಿ ಮಾಡಲಿ ಬಿಡಲಿ ನನಗೇನಾಬೇಕು. ವ್ಯಾಪಾರ ಮಾಡಿಕೊಂಡು ಹೋಗಿರೋರು ಅವರು. ಅವರು ಏನು ವ್ಯಾಪಾರ ಮಾಡ್ಕೊಂಡಿದ್ದಾರೋ ನನಗೇನು ಗೊತ್ತು ಎಂದು ಕುಟುಕಿದರು.

ಲಿಂಗಾಯಿತ ಸಮುದಾಯಕ್ಕೆ ಒಬಿಸಿ ಮೀಸಲಾತಿಗೆ ಆಗ್ರಹ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಇಲ್ಲದೆ ಯಾವುದೇ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ನೀಡಲು ಬರಲ್ಲ. ‘ಹಿಂದುಳಿದ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಲು ಏನಾದರೊಂದು ಆಧಾರ ಬೇಕಲ್ಲ. ಏನಿದೆ, ಯಾವ ವರದಿ ಇದೆ’ ಎಂದು ಪ್ರಶ್ನಿಸಿದರು. sooner –state- BJP government -moves away- better-Former CM -Siddaramaiah

ಹಾಗೆಯೇ ‘ನಾನು ಯಾವುದೇ ಸಮುದಾಯದ ಪರವೂ ಇಲ್ಲ, ವಿರುದ್ಧವೂ ಇಲ್ಲ. ಆದರೆ, ಯಾವ್ಯಾವ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ಪಡೆಯುವ ಅರ್ಹತೆ ಇದೆಯೋ, ಆ ಎಲ್ಲ ಸಮುದಾಯಗಳಿಗೂ ನೀಡಬೇಕು ಎಂದು ತಿಳಿಸಿದರು.

Keywords: sooner –state- BJP government -moves away- better-Former CM -Siddaramaiah