Monday, September 21, 2026

BDA Apartments

ಲಕ್ಷಾಂತರ ರೂ. ಮೌಲ್ಯದ ಕೋಟಾ ನೋಟು ದಂಧೆಯಲ್ಲಿ ತೊಡಗಿದ್ದ ಆರು ಮಂದಿ ಬಂಧನ BDA JK_Adv...
Home Crime ಲಕ್ಷಾಂತರ ರೂ. ಮೌಲ್ಯದ ಕೋಟಾ ನೋಟು ದಂಧೆಯಲ್ಲಿ ತೊಡಗಿದ್ದ ಆರು ಮಂದಿ ಬಂಧನ.

ಲಕ್ಷಾಂತರ ರೂ. ಮೌಲ್ಯದ ಕೋಟಾ ನೋಟು ದಂಧೆಯಲ್ಲಿ ತೊಡಗಿದ್ದ ಆರು ಮಂದಿ ಬಂಧನ.

ಉತ್ತರ ಕನ್ನಡ,ಜೂ,2,2021(www.justkannada.in): ಲಕ್ಷಾಂತರ ರುಪಾಯಿ ಮೌಲ್ಯದ ಕೋಟಾ ನೋಟು ವ್ಯವಹಾರ ನಡೆಸುತ್ತಿದ್ದ ಆರು ಜನರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ  ಬಂಧಿಸಿದ್ದಾರೆ.jk

ಮಹಾರಾಷ್ಟ್ರದ ಕಿರಣ ದೇಸಾಯಿ(40), ಗಿರೀಶ ಪೂಜಾರಿ(42), ಬೆಳಗಾವಿಯ ಅಮರ ನಾಯ್ಕ(30), ಸಾಗರ ಕುಣ್ಣೂರ್ಕರ್(28), ದಾಂಡೇಲಿಯ ಶಬ್ಬೀರ್ ಕುಟ್ಟಿ(45), ಶಿವಾಜಿ ಕಾಂಬ್ಳೆ(52) ಬಂಧಿತರಾಗಿದ್ದು,  ಡಿಡಿಎಲ್ ವನಶ್ರೀ ಭಾಗದ ಶಿವಾಜಿ ಕಾಂಬ್ಳೆ ಎನ್ನುವವರ ಮನೆಯಲ್ಲಿ 4.5 ಲಕ್ಷ ಅಸಲಿ ನೋಟು ಪಡೆದು 9 ಲಕ್ಷ ನಕಲಿ ನೋಟು ನೀಡಲು ಮುಂದಾಗಿದ್ದ ವೇಳೆ ದಾಳಿ ನಡೆಸಲಾಗಿದೆ‌.

ಬಂಧಿತರಿಂದ 4.5 ಲಕ್ಷ ಅಸಲಿ ನೋಟು, 69 ಲಕ್ಷ ರೂಪಾಯಿ  ಖೋಟಾ ನೋಟು ವಶಕ್ಕೆ ಪಡೆದಿದ್ದಾರೆ. ವ್ಯವಹಾರಕ್ಕೆ ಬಳಸಿದ್ದ ಎರಡು ಕಾರು ಸಹ ವಶಪಡಿಸಿಕೊಳ್ಳಲಾಗಿದೆ. ಘಟನೆ ಸಂಬಂಧ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Six -arrested –north kannada-police- Counterfeit -note