Thursday, August 6, 2026

BDA Apartments

Home Front Page ಪರಿಹಾರ ಧನ ಅರ್ಜಿ ಸಲ್ಲಿಕೆಗೆ ನಾಳೆ ಮೈಸೂರು ಜಿಲ್ಲಾದ್ಯಂತ ಸೇವಾಸಿಂಧು ಕೇಂದ್ರ ತೆರೆಯಲು ಅನುಮತಿ.

ಪರಿಹಾರ ಧನ ಅರ್ಜಿ ಸಲ್ಲಿಕೆಗೆ ನಾಳೆ ಮೈಸೂರು ಜಿಲ್ಲಾದ್ಯಂತ ಸೇವಾಸಿಂಧು ಕೇಂದ್ರ ತೆರೆಯಲು ಅನುಮತಿ.

ಮೈಸೂರು,ಜೂನ್,2,2021(www.justkannada.in):  ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರಿಗೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಧನವನ್ನ ಪಡೆಯಲು ಅರ್ಜಿ ಸಲ್ಲಿಕೆಗಾಗಿ ಜೂನ್ 3 ರಂದು(ನಾಳೆ)  ಮೈಸೂರು ಜಿಲ್ಲಾದ್ಯಂತ ಸೇವಾಸಿಂಧು ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ.

ಈ ಕುರಿತು ಆದೇಶ ಹೊರಡಿಸಿರುವ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಸರ್ಕಾರದ ಆದೇಶ ಸಂಖ್ಯೆ: ಟಿಡಿ 126 ಟಿಡಿಒ 2021, ದಿ:21-05-2021 ರಲ್ಲಿ ಕೋವಿಡ್-19ರ 2ನೇ ಅಲೆಯ ತೀವ್ರತೆ ಹಿನ್ನಲೆಯಲ್ಲಿ ವಾಣಿಜ್ಯ ಮತ್ತಿತರ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿ ಆದೇಶಿಸಿರುವುದರಿಂದ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರಿಗೆ ರೂ.3000/- ಗಳ ಪರಿಹಾರ ಧನವನ್ನು ನೀಡಲು ಷರತ್ತಿಗೊಳಪಟ್ಟು ಮಂಜೂರಾತಿ ನೀಡಿ ಆದೇಶಿಸಲಾಗಿದೆ.  ಸದರಿ ಪರಿಹಾರ ಧನವನ್ನು ಪಡೆಯಲು ಆನ್ ಲೈನ್ ಮೂಲಕ ಸೇವಾ ಸಿಂಧು ವೆಬ್ ಪೋರ್ಟಲ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ದಿನಾಂಕ: 27-05-2021 ರಂದು ಬೆಳಿಗ್ಗೆ 11 ರಿಂದ ಪ್ರಾರಂಭಿಸಲಾಗಿರುತ್ತದೆ.symptoms - black fungus- hospital –treatment-Mysore DC- Rohini Sindhuri

ಆದ್ದರಿಂದ, ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಆನ್ ಲೈನ್ ಮೂಲಕ ಸೇವಾ ಸಿಂಧು ಅಂತರ್ಜಾಲದಲ್ಲಿ ಸಲ್ಲಿಸಿ ಪರಿಹಾರ ಧನವನ್ನು ಪಡೆದುಕೊಳ್ಳಲು ಅನುವಾಗುವಂತೆ ದಿನಾಂಕ: 03-06-2021 ರ ಗುರುವಾರ ಬೆಳಗ್ಗೆ 6.00 ಗಂಟೆಯಿಂದ 12.00 ಗಂಟೆಯವರೆಗೆ ಮೈಸೂರು ಜಿಲ್ಲಾದ್ಯಂತ ಸೇವಾಸಿಂಧು ಕೇಂದ್ರ ತೆರೆಯಲು ಅನುಮತಿಸಿದೆ ಎಂದು ತಿಳಿಸಿದ್ದಾರೆ.

Key words: agree-open seva sindu centre-Mysore district – application- compensation-mysore-DC-order