ಮೈಸೂರು ಪಾಲಿಕೆಯಲ್ಲಿ ಮೈತ್ರಿ ಮುರಿದು ಬಿಳಲು ಸಿದ್ದರಾಮಯ್ಯ ನೇರ ಕಾರಣ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ಮೈಸೂರು,ಫೆಬ್ರವರಿ,24,2021(www.justkannada.in):  ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮೈತ್ರಿ ಮುರಿದು ಬಿಳಲು ಸಿದ್ದರಾಮಯ್ಯ ನೇರ ಕಾರಣ ಎಂದು ಜೆಡಿಎಸ್ ನಾಯಕ , ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.jk

ಮೈಸೂರು ಮೇಯರ್ ,ಉಪಮೇಯರ್ ಚುನಾವಣೆ ಹಿನ್ನೆಲೆ ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಿದ್ಧರಾಮಯ್ಯ ಅವರ ಮಾತುಗಳಿಂದಲೇ ಈ ಮೈತ್ರಿ ಮುರಿದು ಬಿದ್ದಿದೆ. ಕಳೆದ ಬಾರಿ ಅವರ ಒತ್ತಡದಿಂದಲೇ ಮೇಯರ್ ಸ್ಥಾನ ಬಿಟ್ಟು ಮೈತ್ರಿ ಆಗಿದ್ವಿ. ಈಗ ಅವರ ಹೇಳಿಕೆಗಳಿಂದ ಬೇಸತ್ತು ಮೈತ್ರಿ ಮುರಿದುಕೊಂಡಿದ್ದೇವೆ. ನಾವು ಯಾರೊಂದಿಗು ಹೋಗೋಲ್ಲ. ನಾವು ನಾಮಪತ್ರ ಸಲ್ಲಿಸುತ್ತೇವೆ. ನೋಡೋಣ ಯಾರಿಗೆ ಅವಕಾಶ ಇದೆ ಅವರು ಮೇಯರ್ ಆಗ್ತಾರೆ ಎಂದರು.

ದೇವೇಗೌಡರು ಯಾರೊಂದಿಗೂ ಹೊಂದಾಣಿಕೆ ಬೇಡ ಅಂದಿದ್ದಾರೆ. ಎರಡು ಪಕ್ಷಗಳಿಂದ ಅಂತರ ಕಾಯ್ದುಕೊಳ್ಳಲು ಹೇಳಿದ್ದಾರೆ. ಅದಕ್ಕಾಗಿ ನಾವು ಯಾರ ಜೊತೆಗೂ ಮೈತ್ರಿ ಆಗಿಲ್ಲ. ಎರಡು ಪಕ್ಷಗಳಿಂದ ನಮಗೆ ಅನ್ಯಾಯ ಆಗಿದೆ. ಹಾಗಾಗಿ ನಮ್ಮ ಶಕ್ತಿ ತೋರಿಸುವ ಸಂದರ್ಭ ಬಂದಿದೆ. ಕಾರ್ಯಕರ್ತರಲ್ಲಿ ಉತ್ಸಹ ತುಂಬಬೇಕಿದೆ. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಕರ್ನಾಟಕವನ್ನು ಅತ್ಯಂತ ಲಘುವಾಗಿ ಕಾಣುತ್ತಿರುವ ಪಕ್ಷ ಬಿಜೆಪಿ. ಈ ಹಿನ್ನೆಲೆ ಎರಡು ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದೇವೆ. ಅಕ್ಕಪಕ್ಕದ ರಾಜ್ಯಗಳಂತೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಬೇಕು. ಕೆಲವರು ನಮ್ಮನ್ನ ಬಿ ಟೀಮ್ ಎಂದು ಕರೆದು  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಗಳಿಸಲು ಕಾರಣವಾದರು ಎಂದು ಹೆಚ್.ಡಿಕೆ ಅಸಮಾಧಾನ ವ್ಯಕ್ತಪಡಿಸಿದರು.Siddaramaiah-  breaking  -alliance –jds-congress-Former CM- HD Kumaraswamy.

ಜಿಟಿ ದೇವೇಗೌಡರು ಪರಿವರ್ತನೆಯಾಗ್ತಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಹಲವಾರು  ಸಂದರ್ಭದಲ್ಲಿ ಹಲವಾರು ನಾಯಕರು ಪರಿವರ್ತನೆ ಅಗೋದನ್ನ ನೋಡಿದ್ದೇವೆ. ಪರಿವರ್ತನೆ ಆಗಲು ಅವರಿಗೆ ಬಿಟ್ಟಿದ್ದು. ಈಗಾಗಲೇ ಪಕ್ಷ ಬಿಟ್ಟು ಹೋದಮೇಲೆ ಏನಾಗುತ್ತೆ ಎಂದು ಈಗಾಗಲೇ ಅವರಿಗೆ ಗೊತ್ತಾಗಿದೆ ಎಂದು ಟಾಂಗ್ ನೀಡಿದರು.

ENGLISH SUMMARY…..

Siddaramaiah directly responsible for coalition failure: Former CM HDK
Mysuru, Feb. 24, 2021 (www.justkannada.in): Former Chief Minister H.D. Kumaraswamy today informed that former CM Siddaramaiah is directly responsible for the failure in coalition with the Congress in the Mysore City Corporation Mayoral elections.Former CM H.D. Kumaraswamy/ Former CM Siddaramaiah/ MCC Mayoral elections/ Coalition failure/ Congress-JDS
Speaking to the media regarding the Mayor, Deputy Mayor elections for the Mysore City Corporation, former Chief Minister H.D. Kumaraswamy said that the coalition broke just because of the words of Siddaramaiah. “We had a coalition with the Congress last time also by leaving the Mayor post under pressure. This time coalition has not been possible because of his words. We won’t go with anybody. We also will submit a nomination, let us see who will get the opportunity to become Mayor,” he said.
“H.D. Devegowda has however refused coalition with anybody, he has asked to maintain distance with both the parties. Hence, we won’t have a coalition with anyone. Both the parties have meted out injustice to us. Hence, the time has come for us to show our strength. We have to pump confidence in our party activists. Hence we have taken this decision, he informed.

Keywords: Former CM H.D. Kumaraswamy/ Former CM Siddaramaiah/ MCC Mayoral elections/ Coalition failure/ Congress-JDS

Key words: Siddaramaiah-  breaking  -alliance –jds-congress-Former CM- HD Kumaraswamy.