ನಮಗೆ ಮೇಯರ್ ಸ್ಥಾನ ಬೇಕು ಅಂತ ಹಠ ಹಿಡಿದು ಕುಳಿತಿಲ್ಲ-ಹೆಚ್.ಡಿಕೆ ಭೇಟಿ ಬಳಿಕ ಎಸ್.ಟಿ ಸೋಮಶೇಖರ್ ಹೇಳಿಕೆ…

ಮೈಸೂರು,ಫೆಬ್ರವರಿ,24,2021(www.justkannada.in): ನಮಗೆ ಮೇಯರ್ ಸ್ಥಾನ ಬೇಕು ಅಂತ ಹಠ ಹಿಡಿದು ಕುಳಿತಿಲ್ಲ. ಮೊದಲ ಬಾರಿ ಆ ಒಂದು ಅವಕಾಶ ಕೊಡಿ ಎಂದು ಜೆಡಿಎಸ್‌ ಗೆ ಕೇಳುತ್ತಿದ್ದೇವೆ  ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.jk

ಮೈಸೂರು ಮೇಯರ್, ಉಪಮೇಯರ್ ಚುನಾವಣೆ ಹಿನ್ನೆಲೆ, ಮತ್ತೆ ಮೈತ್ರಿ ಕಸರತ್ತು ಮುಂದುವರೆದಿದ್ದು ಸಚಿವ ಎಸ್.ಟಿ ಸೋಮಶೇಖರ್  ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು.

ಹೆಚ್.ಡಿ ಕುಮಾರಸ್ವಾಮಿ ಭೇಟಿ ಬಳಿಕ ಮಾತನಾಡಿದ ಸಚಿವ  ಎಸ್,ಟಿ ಸೋಮಶೇಖರ್, ಸದ್ಯ ತೀರ್ಮಾನ ಏನು ಆಗಿಲ್ಲ, ಅಂತಿಮವಾಗಿ ಮತ್ತೊಂದು ಮನವಿ ಮಾಡಿದ್ದೇವೆ. ಅವರು ಅವರ ಪಕ್ಷದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಮ್ಮ ಪಕ್ಷದಿಂದಲೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಮ್ಮ‌ ಪಕ್ಷದಿಂದ ಸೂಚನೆ ಹಿನ್ನಲೆ, ಮತ್ತೊಮ್ಮೆ ಭೇಟಿ ಮಾಡಿದ್ದೇನೆ. ಎಲ್ಲ ಪಾಲಿಕೆಯ ಸದಸ್ಯರು, ಎಂಎಲ್‌ಸಿ, ಎಂಎಲ್ ಎಗಳನ್ನ ನಾನು ಸಂಪರ್ಕ ಮಾಡ್ತಿನಿ. ಒಬ್ಬ ಜಿಲ್ಲಾ ಉಸ್ತುವಾರಿ ಸಚಿವನಾಗಿ ಸಂಪರ್ಕ ಮಾಡುತ್ತಿದ್ದೇನೆ. ಮರಿತಿಬ್ಬೆಗೌಡ, ಜಿಟಿ ದೇವೇಗೌಡ, ಸಂದೇಶ್ ನಾಗರಾಜ್‌ರನ್ನ ಸಹಕಾರ‌ ಕೋರಿದ್ದೇನೆ. ಕೇಳೋದು ನನ್ನ ಕೆಲಸ, ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು ಎಂದು ತಿಳಿಸಿದರು. mysore-mayor-deputy mayor-election- minister-ST Somashekhar –HD kumaraswamy

ನಮಗೆ ಮೇಯರ್ ಸ್ಥಾನ ಬೇಕು ಅಂತ ಹಠ ಹಿಡಿದು ಕುಳಿತಿಲ್ಲ. ಮೊದಲ ಬಾರಿ ಆ ಒಂದು ಅವಕಾಶ ಕೊಡಿ ಎಂದು ಜೆಡಿಎಸ್‌ಗೆ ಕೇಳುತ್ತಿದ್ದೇವೆ. ಮುಂದಿನ ಬಾರಿ ನಿಮ್ಮ ಪಕ್ಷದ ಮೇಯರ್ ಆಗಲಿ ಎಂದಿದ್ದೇವೆ. ಆದರೆ ನಾವು ಸ್ವತಂತ್ರವಾಗಿ ನಾಮಪತ್ರ ಸಲ್ಲಿಕೆ ಮಾಡ್ತಿವಿ ಎಂದಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಸಮಯಾವಕಾಶ ಸಿಗಲಿದೆ. ಆ ಸಮಯದಲ್ಲಿ ಏನು ಬದಲಾವಣೆ ಆಗಲಿದೆ ಎಂಬುದನ್ನ ಕಾದು ನೋಡಬೇಕು ಎಂದರು.

Key words: mysore-mayor-deputy mayor-election- minister-ST Somashekhar –HD kumaraswamy