Friday, November 6, 2026

Dasara Wishes

ಕುಡಿಯುವ ನೀರಿಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ- ಜಿಲ್ಲಾಧಿಕಾರಿಗಳ...
Happy Dasara
Home Front Page ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತ: ಯಾರು ಭಯಪಡುವ ಅಗತ್ಯವಿಲ್ಲ-ಎಡಿಜಿಪಿ ಅಲೋಕ್ ಕುಮಾರ್.

ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತ: ಯಾರು ಭಯಪಡುವ ಅಗತ್ಯವಿಲ್ಲ-ಎಡಿಜಿಪಿ ಅಲೋಕ್ ಕುಮಾರ್.

ಶಿವಮೊಗ್ಗ,ಆಗಸ್ಟ್,17,2022(www.justkannada.in):  ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತವಾಗಿದ್ದು, ಯಾರು ಭಯಪಡುವ ಅಗತ್ಯವಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ಆಗಸ್ಟ್ 15 ರಂದು ಶಿವಮೊಗ್ಗದಲ್ಲಿ ಗಲಭೆಯುಂಟಾಗಿ ಪೊಲೀಸರಿಂದ ಲಾಠಿಚಾರ್ಜ್ ಆಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಬೆನ್ನಲ್ಲೆ ಪ್ರೇಮ್ ಸಿಂಗ್ ಎನ್ನುವವರಿಗೆ ಕಿಡಿಗೇಡಿಗಳು ಚಾಕುವಿನಿಂದ ಹಲ್ಲೆ ಮಾಡಿದ್ದು ಮತ್ತಷ್ಟು ಪರಿಸ್ಥಿತಿಯನ್ನ ಹದಗೆಡಿಸಿತ್ತು. ನಂತರ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.

ಈ ಸಂಬಂಧ ಮಾತನಾಡಿರುವ ಎಡಿಜಿಪಿ ಅಲೋಕ್ ಕುಮಾರ್,  ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತವಾಗಿದೆ. ನಗರದಲ್ಲಿ ಇಂದು ಶಾಲಾ ಕಾಲೇಜು ಆರಂಭವಾಗಿವೆ. ಯಾರು ಭಯಪಡುವ ಅಗತ್ಯವಿಲ್ಲ. ಎರಡು ದಿನದಲ್ಲಿ ನಗರ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ.  ನಿಷೇಧಾಜ್ಞೆ ಮುಂದುವರೆಸಲಾಗಿದೆ ಎಂದಿದ್ದಾರೆ.ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತ: ಯಾರು ಭಯಪಡುವ ಅಗತ್ಯವಿಲ್ಲ-ಎಡಿಜಿಪಿ ಅಲೋ...

ಭದ್ರಾವತಿಯಲ್ಲಿ ಇಂದೂ ಕೂಡ ಅಂಗಡಿಗಳು ಬಂದ್ ಆಗಿವೆ.  ಅಗತ್ಯ ವಸ್ತುಗಳ ಅಂಗಡಿ ಹೊರತುಪಡಿಸಿ ಎಲ್ಲಾ ಬಂದ್ ಆಗಿದ್ದು ಭದ್ರಾವತಿಯಲ್ಲಿ ಹೋಟೆಲ್ ಗಳಲ್ಲಿ ಪಾರ್ಸಲ್ ಗಷ್ಟೆ ಅವಕಾಶವಿದೆ.

Key words: Shimoga- city –completely- peaceful-ADGP- Alok Kumar.