‘ಶಿ ಇಸ್ ಟೋಟಲ್ ಫೇಲ್‌ ಇನ್ ಫೈನಾನ್ಸ್’-ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ…

ಮೈಸೂರು,ಫೆ,1,2020(www.justkannada.in): ನಿರ್ಮಲಾ ಸೀತರಾಮನ್ ವಿಫಲ ಆರ್ಥಿಕ ಸಚಿವೆಯಾಗಿದ್ದಾರೆ. ‘ಶಿ ಇಸ್ ಟೋಟಲ್ ಫೇಲ್‌ ಇನ್ ಫೈನಾನ್ಸ್. ಒಂದು ಆರ್ಥಿಕ ಶಿಸ್ತು ಬೇಕು ಅಲ್ಲವೇ. ಅದು ಈ ಸರ್ಕಾರದಲ್ಲಿ ಕಾಣಿಸುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಬೆಂಗಳೂರಿಗೆ ಸಬರ್ಬನ್‌ ರೈಲು ಮಾಡ್ತಿವಿ ಅಂತ ಹೇಳಿದ್ದಾರೆ. ಕಳೆದ ಬಜೆಟ್ ನಲ್ಲು ಇದನ್ನ ಹೇಳಿದ್ರು. ಮತ್ತೆ ಬೆಂಗಳೂರಿನವರು ಖುಷಿ ಪಡಲಿ ಅಂತ ಪುನರುಚ್ಚರಿಸಿದ್ದಾರೆ. ಕಳೆದ ಬಾರಿ ಒಂದು ರೂಪಾಯಿ ಕೊಟ್ಟಿರಲಿಲ್ಲ. ಈಗಲೂ ಹಣ ಮೀಸಲಿಟ್ಟಿಲ್ಲ. ಇದೊಂದು ನಗೆಪಾಟಲಿನ ವಿಚಾರ ಎಂದು ಲೇವಡಿ ಮಾಡಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರ್ಥಿಕ ತಜ್ಞರು. ಸದ್ಯ ದೇಶದ ಆರ್ಥಿಕ‌ ಪರಿಸ್ಥಿತಿ ಕುಸಿಯುತ್ತಿದೆ. ಅವರ ಸಲಹೆಯನ್ನಾದ್ರು ಪಡೆಯಬಹುದಿತ್ತು. ಆದ್ರೆ ಸರ್ಕಾರ ಅವರ ಸಲಹೆ‌ ಪಡೆಯಲು ತಯಾರಿಲ್ಲ. ನಾವೆಲ್ಲ ತಾಳಿ‌ ಮಾರೋದು ತೀರ ಕಷ್ಟ ಬಂದಾಗ. ಕೊನೆಯದಾಗಿ ಎಲ್ಲವನ್ನು ಬಿಟ್ಟು ತಾಳಿ ಕಳೆದುಕೊಡ್ತಿವಿ. ಹಾಗೇ ಕೇಂದ್ರ ಸರ್ಕಾರ ಕೊನೆಯದಾಗಿ ಎಲ್‌ಐಸಿ ಶೇರು ಮಾರಲು ಮುಂದಾಗಿದೆ. ಇದು ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಪರಿಸ್ಥಿತಿ. ಎಂಥ ಪರಿಸ್ಥಿತಿಗೆ ನಾವು ಬಂದಿದ್ದೇವೆ. ಎಲ್‌ಐಸಿ ಶೇರು ಮಾರಾಟ ಮಾಡೋ ಸ್ಥಿತಿ ಈ ದೇಶಕ್ಕೆ ಬಂದಿದೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

ಸಿಎಎ ಎನ್ ಆರ್.ಸಿ ಜಾರಿಯಿಂದ ಆರ್ಥಿಕತೆ ಮೇಲೆ ಹೊಡೆತ ಬೀಳುತ್ತೆ. ಇಂತಹ ಪರಿಸ್ಥಿತಿಯಲ್ಲಿ ಯಾರು ಕೂಡ ಬಂಡವಾಳ ಹೂಡಲು ಬರುವುದಿಲ್ಲ. ನಿರ್ಮಲಾ ಸೀತರಾಮನ್ ವಿಫಲ ಆರ್ಥಿಕ ಸಚಿವೆಯಾಗಿದ್ದಾರೆ. ಶಿ ಇಸ್ ಟೋಟಲ್ ಫೇಲ್‌ ಇನ್ ಫೈನಾನ್ಸ್. ಒಂದು ಆರ್ಥಿಕ ಶಿಸ್ತು ಬೇಕು ಅಲ್ಲವೇ. ಅದು ಈ ಸರ್ಕಾರದಲ್ಲಿ ಕಾಣಿಸುತ್ತಿಲ್ಲ.ಎಂದು ಟೀಕಿಸಿದರು.

ಕೃಷಿ ಉಡಾನ್ ಯೋಜನೆಯಲ್ಲಿ ಯಾವ್ ಬೋರೆಗೌಡ ತೆಗೆದುಕೊಂಡು ಹೋಗ್ತಾನೆ. ಇದು ಕೇವಲ ಅಂಬಾನಿ ಅದಾನಿ ಮಾತ್ರ ತೆಗೆದುಕೊಂಡು ಹೋಗಲು ಸಾಧ್ಯ ಎಂದು ಕೃಷಿ ಉಡಾನ್ ಯೋಜನೆ ಬಗ್ಗೆ ವ್ಯಂಗ್ಯವಾಡಿದ ಸಿದ್ದರಾಮಯ್ಯ. ಅಕ್ಕಿ ಕೊಡುವುದು ಬಡವರ ಯೋಜನೆ. ಬಡವರ ಪರವಾದ ಯೋಜನೆ‌ ಮುಂದುವರೆಸಲು ಈ ಸರ್ಕಾರಕ್ಕೆ ಇಷ್ಟ ಇಲ್ಲ. ಕಡಿತ ಮಾಡುತ್ತೇವೆ ಅಂತ ಸಚಿವೆ ಶಶಿಕಲ್ಲಾ ಜೊಲ್ಲೆ ಹೇಳಿಲ್ಲ. ಇದನ್ನ ಯಡಿಯೂರಪ್ಪ ಹೇಳಿಸಿರೋದು. ದುಡ್ಡ ಉಳಿಸಿ ಏನ್ ಮಾಡ್ತಾರಂತೆ. ಆಪರೇಷನ್ ಕಮಲ‌ ಮಾಡೋಕಾ. ಒಬ್ಬಬ್ಬ ಶಾಸಕರನ್ನ ಕರೆದುಕೊಂಡು ಹೋಗಲು ೨೫ ಕೋಟಿ ಕೊಟ್ಟಿದ್ರು. ಎಲೆಕ್ಷನ್ ಗೆ ೩೫ ಕೋಟಿ ಕೊಟ್ಟಿದ್ರು. ಅಷ್ಟೊಂದು ದುಡ್ಡು ಎಲ್ಲಿಂದ ಬಂತು. ಇದನೆಲ್ಲ ನೋಡಿದ ಮೇಲು ನಿರ್ಮಲ ಸೀತರಾಮನ್ ಭ್ರಷ್ಟಾಚಾರ ಮುಕ್ತ ಸರ್ಕಾರ ಕೊಡ್ತಿವಿ ಅಂತಾರೆ ಎಂದು ವಾಗ್ದಾಳಿ ನಡೆಸಿದರು.

Key words: She’s- Total Fail –Finance-Former CM –Siddaramaiah- criticizes- Union Minister -Nirmala Sitharaman